ವ್ಹೀಲ್‌ಚೇರ್‌ನಲ್ಲಿ ಬಂದ ರಶ್ಮಿಕಾ ಮಂದಣ್ಣಗೆ ವಿಕ್ಕಿ ಕೌಶಲ್ ಆರೈಕೆ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಛಾವಾ’ (Chhaava) ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಇತ್ತೀಚೆಗೆ ಅವರು ಜಿಮ್‌ನಲ್ಲಿ ಕಾಲಿಗೆ ಏಟು ಮಾಡಿಕೊಂಡಿದ್ದು, ಅದನ್ನು ಲೆಕ್ಕಿಸದೇ ‘ಛಾವಾ’ ಚಿತ್ರದ ಪ್ರಚಾರಕ್ಕೆ ನಟಿ ಸಾಥ್ ನೀಡುತ್ತಿದ್ದಾರೆ. ಈ ವೇಳೆ, ಸಿನಿಮಾ ಸಮಾರಂಭಕ್ಕೆ ವ್ಹೀಲ್‌ಚೇರ್‌ನಲ್ಲಿ ಬಂದ ರಶ್ಮಿಕಾಗೆ ವಿಕ್ಕಿ ಕೌಶಲ್ ಆರೈಕೆ ಮಾಡಿದ್ದಾರೆ. ಇದನ್ನೂ ಓದಿ:ಕೊನೆಗೂ ಭಾವಿ ಪತಿಯನ್ನು ಪರಿಚಯಿಸಿದ ಚೈತ್ರಾ ವಾಸುದೇವನ್

ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ನಟನೆಯ ‘ಛಾವಾ’ ಸಿನಿಮಾದ ಪ್ರಚಾರ ಕೆಲಸ ಭರದಿಂದ ನಡೆಯುತ್ತಿದೆ. ಇನ್ನೂ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾದಲ್ಲಿ ನಟಿಸಿರುವ ಹಿನ್ನೆಲೆ ನಟಿಯ ಕೆರಿಯರ್‌ನಲ್ಲಿ ಈ ಚಿತ್ರ ವಿಶೇಷವಾಗಿದೆ. ಹಾಗಾಗಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರೂ ಲೆಕ್ಕಿಸದೇ ಸಿನಿಮಾ ಪ್ರಮೋಷನ್‌ಗೆ ಆಗಮಿಸಿದ್ದಾರೆ. ರಶ್ಮಿಕಾ ಕುಳಿತಿದ್ದ ವ್ಹೀಲ್‌ಚೇರ್ ಅನ್ನು ವಿಕ್ಕಿ ಕೌಶಲ್ ತಳ್ಳಿಕೊಂಡು ಬಂದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ವಿಕ್ಕಿ ನಡೆ ನೋಡಿ ಅನೇಕರು ಜೆಂಟಲ್ ಮ್ಯಾನ್ ಎಂದು ಹಾಡಿ ಹೊಗಳಿದ್ದಾರೆ.

 

View this post on Instagram

 

A post shared by Viral Bhayani (@viralbhayani)

ಇನ್ನೂ ‘ಛಾವಾ’ ಸಿನಿಮಾದಲ್ಲಿ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ಕೌಶಲ್ ನಿಭಾಯಿಸಿದ್ದಾರೆ. ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದೆ. ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ಯಾವ ರೀತಿ ನಿರ್ವಹಿಸುತ್ತಿದ್ದರು ಎಂಬುದು ಕಥೆಯ ಹೈಲೈಟ್ ಆಗಿದೆ.

ಇನ್ನೂ ಛತ್ರಪತಿ ಸಂಭಾಜಿ ಮಹಾರಾಜನ ಪತ್ನಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಪತಿಯ ಹೋರಾಟಕ್ಕೆ ಸಾಥ್ ಕೊಡುವ ಪತ್ನಿಯಾಗಿ ನಟಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಲಕ್ಷ್ಮಣ್‌ ಉಟೇಕರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಫೆ.14ರಂದು ರಿಲೀಸ್ ಆಗಲಿದೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.