ವಾಯುಪಡೆ ಅಧಿಕಾರಿಯಾದ ನಟ ವರುಣ್ ತೇಜ್

ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಸುಪುತ್ರ ವರುಣ್ ತೇಜ್  (Varun Tej) ನಟನೆಯ #VT13 ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಕೊನೆಯ ಹಂತದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಶೀಘ್ರದಲ್ಲಿಯೇ ಬಿಡುಗಡೆ ದಿನಾಂಕ ಘೋಷಿಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.

ತೆಲುಗು ಜೊತೆ ಹಿಂದಿಯಲ್ಲಿ ಮೂಡಿ ಬರಲಿರುವ ಈ ಸಿನಿಮಾ ಮೂಲಕ ವರುಣ್ ಬಿಟೌನ್ ಅಂಗಳಕ್ಕೂ ಪದಾರ್ಪಣೆ ಮಾಡ್ತಿದ್ದಾರೆ. ಸೋನಿ ಪಿಕ್ಚರ್ಸ್ ಇಂಟರ್ ನ್ಯಾಷನಲ್ ಬ್ಯಾನರ್ ಸಹಯೋಗದಲ್ಲಿ ರೆನೈಸಾನ್ಸ್ ಪಿಕ್ಚರ್ಸ್ ನಡಿ ಸದೀಪ್ ಮುಡ್ಡಾ ದೊಡ್ಡ ಪ್ರಮಾಣದಲ್ಲಿ ಚಿತ್ರ ನಿರ್ಮಾಣ ಮಾಡ್ತಿದ್ದು, ನಂದಕುಮಾರ್ ಅಬ್ಬಿನೇನಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

ಸತ್ಯ ಘಟನೆಯಾಧಾರಿತ ಆಕ್ಷನ್ ಡ್ರಾಮಾ ಕಥಾಹಂದರ ಹೊಂದಿರುವ ಹೆಸರಿಡದ ಈ ಚಿತ್ರದಲ್ಲಿ ವರುಣ್ ತೇಜ್ ವಾಯು ಪಡೆ ಅಧಿಕಾರಿಯಾಗಿ ನಟಿಸ್ತಿದ್ದು, ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್  (Manushi Chillar) ರಾಡಾರ್ ಆಫೀಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರಕ್ಕೆ ಶಕ್ತಿ ಪ್ರತಾಪ್ ಸಿಂಗ್ (Shakti Pratap Singh) ಆಕ್ಷನ್ ಕಟ್ ಹೇಳಿದ್ದು, ಜಾಹೀರಾತು ನಿರ್ದೇಶಕ ಹಾಗೂ ಛಾಯಾಗ್ರಹಕರಾಗಿರುವ ಅವರಿಗೆ ಇದು ಮೊದಲ ಸಿನಿಮಾವಾಗಿದೆ. ವಿಶೇಷ ಎಂದರೆ ಸಿನಿಮಾದ ಕಥೆಯನ್ನು ಶಕ್ತಿ ಪ್ರತಾಪ್ ಸಿಂಗ್ ಜೊತೆಗೆ ಆಮೀರ್ ಖಾನ್ ಹಾಗೂ ಸಿದ್ಧಾರ್ಥ್ ರಾಜ್ ಕುಮಾರ್ ಬರೆದಿದ್ದಾರೆ.