ಸಹನಟನ ಜೊತೆ ರೊಮ್ಯಾಂಟಿಕ್ ಪೋಸ್ ಕೊಟ್ಟ ಕೀರ್ತಿ ಸುರೇಶ್‌ಗೆ ನೆಟ್ಟಿಗರಿಂದ ಟೀಕೆ

ಸೌತ್ ಬೆಡಗಿ ಕೀರ್ತಿ ಸುರೇಶ್ (Keerthy Suresh) ಡಿ.12ರಂದು ಆಂಟೋನಿ ತಟ್ಟಿಲ್ (Antony Thattil) ಜೊತೆ ಹಸೆಮಣೆ ಏರಿದರು. ಈ ಬೆನ್ನಲ್ಲೇ ಕೀರ್ತಿ ನಟಿಸಿರುವ ಮೊದಲ ಬಾಲಿವುಡ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ನವವಧು ಕೀರ್ತಿ ಸುರೇಶ್ ಇದೀಗ ನಟ ವರುಣ್ ಧವನ್ ಜೊತೆ ರೊಮ್ಯಾಂಟಿಕ್ ಪೋಸ್ ಕೊಟ್ಟಿದ್ದಕ್ಕೆ ನೆಟ್ಟಿಗರು ಟೀಕಿಸಿದ್ದಾರೆ.

‘ಬೇಬಿ ಜಾನ್’ ಬಾಲಿವುಡ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಇತ್ತೀಚೆಗೆ ಮಾಡ್ರನ್ ಡ್ರೆಸ್ ತೊಟ್ಟು ಮಾಂಗಲ್ಯ ಧರಿಸಿ ಬಂದಿದ್ದಕ್ಕೆ ನಟಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಈ ಬೆನ್ನಲ್ಲೇ ವರುಣ್ (Varun Dhawan) ಜೊತೆ ಕ್ಲೋಸ್ ಆಗಿ ಪೋಸ್ ಕೊಟ್ಟಿದ್ದಕ್ಕೆ ನಟಿ ವಿರುದ್ಧ ನೆಟ್ಟಿಗರು ರಾಂಗ್ ಆಗಿದ್ದಾರೆ. ಮದುವೆಯಾಗಿ 10 ದಿನ ಕಳೆದಿಲ್ಲ. ಇಷ್ಟು ರೊಮ್ಯಾಂಟಿಕ್ ಆಗಿ ನಟನೊಂದಿಗೆ ಪೋಸ್ ಕೊಡುವ ಅಗತ್ಯ ಇದ್ಯಾ? ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ಕೆಲ ಪರ ವಿರೋಧದ ಚರ್ಚೆಗೆ ನಡೆಯುತ್ತಿದೆ.

ಇನ್ನೂ ಇದೇ ಡಿ.12ರಂದು ಗೋವಾದಲ್ಲಿ ನಟಿ ಅದ್ಧೂರಿಯಾಗಿ ಮದುವೆಯಾದರು. 15 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು. ಈ ಮದುವೆಗೆ ತ್ರಿಷಾ, ದಳಪತಿ ವಿಜಯ್, ಕಲ್ಯಾಣಿ ಪ್ರಿಯಾದರ್ಶನ್, ಅಟ್ಲಿ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.