ಉಪೇಂದ್ರ ರಿಯಲ್ ಹೀರೋ ಅಲ್ಲ, ರೀಲ್ ಹೀರೋ ಅಂದಿದ್ದಕ್ಕೆ ಉಪಾಧ್ಯಕ್ಷೆಗೆ ಬಿತ್ತಂತೆ ಒದೆ!

ಬೆಂಗಳೂರು: ರಿಯಲ್ ಸ್ಟಾರ್ ನಟ ಉಪೇಂದ್ರ ಅವರ ಆಪ್ತ ಕಾರ್ಯದರ್ಶಿಯೊಬ್ಬರು ಕೆಪಿಜೆಪಿ ಮಹಿಳಾ ಉಪಾಧ್ಯಕ್ಷೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.

ಉಪೇಂದ್ರ ಅವರ ಪಿಎ ಹಿತೇಶ್ ಬೆಂಗಳೂರಿನ ಸುಂಕದಕಟ್ಟೆಯ ಮುದ್ದಿನಪಾಳ್ಯದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೆಪಿಜೆಪಿ ಪಕ್ಷದ ರಾಜ್ಯ ಮಹಿಳಾ ಉಪಾಧ್ಯಕ್ಷೆ ಲಲಿತಾ ಮೇರಿ ಆರೋಪಿಸಿದ್ದಾರೆ.

ಶನಿವಾರ ರಾತ್ರಿ ಕೆಪಿಜೆಪಿ ಪಕ್ಷದ ಮಹಿಳಾ ವಾಟ್ಸಾಪ್ ಗ್ರೂಪ್‍ಗೆ ಉಪೇಂದ್ರ ರಿಯಲ್ ಹೀರೋ ಅಲ್ಲ, ರೀಲ್ ಹೀರೋ ಯಾರು ನಂಬಬೇಡಿ ಎಂದು ಲಲಿತಾ ಮೇರಿ ಮಸೇಜ್ ಮಾಡಿದ್ದರು. ಲಲಿತಾ ಮೇರಿ ಅವರ ಈ ಮಸೇಜ್‍ಗೆ ಹಿತೇಶ್ ಪ್ರತಿಕ್ರಿಯಿಸಿ, ಯಾರೇ ನೀನು, ನಾಯಿ ಅಂತ ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಸುಂಕದಕಟ್ಟೆಯ ಕೆಇಎಲ್ ಕಾಲೇಜ್ ಬಳಿ ಲಲಿತಾ ಮೇರಿ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ಬೈಕ್‍ನಲ್ಲಿ ಬಂದ ಹಿತೇಶ್ ಮತ್ತು ಆತನ ಸ್ನೇಹಿತ ಹಲ್ಲೆ ಮಾಡಿದ್ದಾರೆ. ಅಲ್ಲದೇ ನಮ್ ಬಾಸ್ ಬಗ್ಗೆ ಕೆಟ್ಟದಾಗಿ ಮಾತಾನಾಡುತ್ತೀಯಾ ಎಂದು ಅವಾಚ್ಯ ಪದಗಳಿಂದ ನಿಂದಿಸಿ ಪರಾರಿಯಾಗಿದ್ದಾರೆ ಎಂದು ಮೇರಿ ಹೇಳಿದ್ದಾರೆ.

ಹಿತೇಶ್ ನನ್ನ ಮೇಲೆ ಹಲ್ಲೆ ಮಾಡಿದ್ದರ ಹಿಂದೆ ನಟ ಉಪೇಂದ್ರನ ಕೈವಾಡ ಇದೆ ಎಂದು ಮೇರಿ ಆರೋಪ ಮಾಡುತ್ತಿದ್ದಾರೆ. ಸದ್ಯ ಮೇರಿ ಸುಂಕದಕಟ್ಟೆಯ ಲಕ್ಷ್ಮೀ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.

https://www.youtube.com/watch?v=h1pj6VMxsXE

 

Comments

Leave a Reply

Your email address will not be published. Required fields are marked *