ಪ್ರಶಾಂತ್ ನೀಲ್‌ಗೆ ಕೈ ಮುಗಿದು ಧನ್ಯವಾದ ತಿಳಿಸಿದ ರಿಯಲ್ ಸ್ಟಾರ್

ರಿಯಲ್ ಸ್ಟಾರ್ ಉಪೇಂದ್ರ ಅವರು ಸದ್ಯ ‘ಯುಐ’ (UI) ಸಿನಿಮಾದ ಟ್ರೋಲ್ ಸಾಂಗ್‌ನಿಂದ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಇದರ ನಡುವೆ ಸಂದರ್ಶನವೊಂದರಲ್ಲಿ ‘ಕೆಜಿಎಫ್’ ಡೈರೆಕ್ಟರ್ ಪ್ರಶಾಂತ್ ನೀಲ್ ಬಗ್ಗೆ ಉಪೇಂದ್ರಗೆ ಕೇಳಲಾಗಿದೆ. ಪ್ರಶಾಂತ್ ನೀಲ್ ಹೆಸರು ಹೇಳ್ತಿದ್ದಂತೆ ಉಪೇಂದ್ರ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ವರಲಕ್ಷ್ಮಿ ಭಾವಿ ಪತಿಗೆ ಇದು 2ನೇ ಮದುವೆ- ಮೊದಲ ಪತ್ನಿ ಯಾರು?

ಕೆಲದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಉಪೇಂದ್ರ ಅವರು ನನ್ನ ನೆಚ್ಚಿನ ನಿರ್ದೇಶಕ ಎಂದು ಪ್ರಶಾಂತ್ ನೀಲ್ ಹಾಡಿ ಹೊಗಳಿದ್ದರು. ಇದರ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದನ್ನೂ ಓದಿ:ನಟಿ ವೈಜಯಂತಿ ಮಾಲಾರನ್ನು ಭೇಟಿಯಾಗಿ ನಮಿಸಿದ ನರೇಂದ್ರ ಮೋದಿ

ಇದರ ಬಗ್ಗೆಯೇ ಉಪೇಂದ್ರ ಅವರಿಗೆ ಸಂದರ್ಶನವೊಂದರಲ್ಲಿ ಕೇಳಲಾಗಿದೆ. ಇದಕ್ಕೆ ಉಪೇಂದ್ರ ಪ್ರತಿಕ್ರಿಯಿಸಿ, ಪ್ರಶಾಂತ್ ನೀಲ್ (Prashanth Neel) ಗ್ರೇಟ್ ಡೈರೆಕ್ಟರ್. ಅವರನ್ನು ಇಡೀ ದೇಶವೇ ಗುರುತು ಹಿಡಿಯುತ್ತಿದೆ. ಅವರು ನನ್ನ ಬಗ್ಗೆ ಮಾತನಾಡುತ್ತಾರೆ ಎಂದರೆ ಖುಷಿ ಆಗುತ್ತದೆ. ಅವರ ಶಬ್ದಗಳು ನನ್ನನ್ನು ಸ್ಪರ್ಶಿಸಿದವು ಎಂದು ಹೇಳುತ್ತಲೇ ಕನ್ನಡದ ಕೆಜಿಎಫ್ (KGF) ನಿರ್ದೇಶಕನಿಗೆ ಥ್ಯಾಂಕ್ಯೂ ಎಂದಿದ್ದಾರೆ ಉಪೇಂದ್ರ.

‘ಉಗ್ರಂ’ ಅಬ್ಬರಿಸಿ ಆಗಿ 10 ವರ್ಷಗಳು ಕಳೆದಿವೆ. ಈ ವೇಳೆ, ಸಂದರ್ಶನದಲ್ಲಿ ನಿಮ್ಮ ಫೇವರಿಟ್ ಡೈರೆಕ್ಟರ್ ಯಾರು ಎಂದು ಅನುಶ್ರೀ ಕೇಳಿದ್ರೆ? ಉಪೇಂದ್ರ ಅಂತ ಪ್ರಶಾಂತ್ ನೀಲ್ ಹೇಳಿದ್ದರು.

ಉಪೇಂದ್ರ (Upendra) ಅವರು ನನ್ನ ಆಲ್ ಟೈಮ್ ಫೇವರಿಟ್ ನಿರ್ದೇಶಕರು. ಕನ್ನಡ ಕಾರ್ಯಕ್ರಮದಲ್ಲಿ ಕೂತಿದ್ದೀನಿ ಎಂದು ಈ ಮಾತನ್ನು ಹೇಳುತ್ತಿದ್ದೀನಿ ಅಂದುಕೊಳ್ಳಬೇಡಿ. ವಿಶ್ವದ ಯಾರೊಬ್ಬರೂ ಶ್.!, ತರ್ಲೆ ನನ್ಮಗ, ಓಂ ಸಿನಿಮಾ ಮಾಡಲು ಸಾಧ್ಯವಿಲ್ಲ. ಒಂದಕ್ಕಿಂತ ಒಂದು ಡಿಫರೆಂಟ್ ಆಗಿದೆ. ‘ಎ’ ಚಿತ್ರವಂತೂ ಯಾರೂ ಮಾಡೋಕೆ ಸಾಧ್ಯವಿಲ್ಲ ಎಂದಿದ್ದರು ಪ್ರಶಾಂತ್ ನೀಲ್. ಈ ವಿಚಾರ ಉಪೇಂದ್ರ ಗಮನಕ್ಕೂ ಬಂದಿದೆ. ಹಾಗಾಗಿ ಸಂದರ್ಶನದ ಮೂಲಕ ಧನ್ಯವಾದ ತಿಳಿಸಿದ್ದಾರೆ.