ಮಳೆ ಸಂಕಷ್ಟಕ್ಕೆ ಬ್ರೇಕ್ ಹಾಕಲು ನಟ ಉಪೇಂದ್ರ ಮಾಸ್ಟರ್ ಪ್ಲಾನ್

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯದ ಮೂಲಕ ರಿಯಲ್ ರಾಜಕಾರಣ ಶುರು ಮಾಡಿದ್ದಾರೆ. ಈಗಾಗಲೇ ಉಪೇಂದ್ರ ಅಭಿವೃದ್ಧಿಯ ಕುರಿತ ಹಲವು ವಿಚಾರಗಳನ್ನ ಚರ್ಚೆ ಮಾಡೋದ್ರಲ್ಲಿ ಬ್ಯೂಸಿಯಾಗಿದ್ದಾರೆ. ಕರ್ನಾಟಕದಲ್ಲಾಗ್ತಿರೋ ಸಮಸ್ಯೆಗಳನ್ನ ಬಗೆಹರಿಸೋ ಕುರಿತು ಈಗಾಗಲೇ ಒಂದಲ್ಲ ಒಂದು ಐಡಿಯಾ ಮಾಡ್ತಿದ್ದಾರೆ.

ಇತ್ತೀಚೆಗಷ್ಟೇ ಅಮೆರಿಕದ ಎನ್‍ಆರ್‍ಐ ಒಬ್ಬರು ಮಳೆಯಿಂದಾಗೋ ಸಮಸ್ಯೆಯನ್ನ ಬಗೆಹರಿಸೋದು ಹೇಗೆ? ಇಲ್ಲಿ ಆಗ್ತಿರೋ ತೊಂದರೆಗಳನ್ನ ಬಗೆಹರಿಸೋದು ಹೇಗೆ ಅನ್ನೋ ನಿಟ್ಟಿನಲ್ಲಿ ಹಲವು ಪ್ಲಾನ್ ಮಾಡಿ ಉಪ್ಪಿ ಮುಂದಿಟ್ಟಿದ್ದಾರೆ. ಈ ಮೂಲಕ ಮಳೆ ನೀರಿನಿಂದಾಗ್ತಿರೋ ಸಮಸ್ಯೆ ಬಗೆಹರಿಸೋ ಪ್ಲಾನ್ ಮಾಡ್ತಿದ್ದಾರೆ. ಈ ಸಂತಸದ ವಿಷಯವನ್ನ ಉಪೇಂದ್ರ ಫೇಸ್‍ಬುಕ್‍ನಲ್ಲಿ ಲೈವ್ ಬರೋ ಮೂಲಕ ಅದನ್ನ ಬಹಿರಂಗಪಡಿಸಿದ್ದಾರೆ. ಇದ್ರಲ್ಲಿ ಎನ್‍ಆರ್‍ಐ ಜೊತೆ ಉಪ್ಪಿ ಮಾಡಿರೋ ಚರ್ಚೆ ಇದೆ.

ಮಳೆ ಸಮಸ್ಯೆ ಬಗ್ಗೆ ಎನ್‍ಆರ್‍ಐ ಸೌರಭ್ ಬಾಬು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ನಟ ಉಪೇಂದ್ರ ಜೊತೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಮೆರಿಕದ ಒಳಚರಂಡಿ ವ್ಯವಸ್ಥೆಯನ್ನ ಕಡಿಮೆ ವೆಚ್ಚದಲ್ಲಿ ಬೆಂಗಳೂರಲ್ಲೂ ನಿರ್ಮಿಸಬಹುದು. ಸಾವಿರಾರು ಕೋಟಿ ಹಣ ಬೇಡ. ಬರೀ 50% ಹಣ ಹಾಕಿದ್ರೆ ಸಾಕು ಸಮಸ್ಯೆಗೆ ಮುಕ್ತಿ ಸಿಗುತ್ತೆ ಅಂತ ಹೇಳಿದ್ದಾರೆ.

ಸಮಸ್ಯೆ ಏನು?: ನಮ್ಮಲ್ಲಿ ರಸ್ತೆ ಪಕ್ಕ ಡ್ರೈನೇಜ್ ಮಾಡಿರ್ತಾರೆ. ಪ್ರತಿ ಹನಿ ಬಿದ್ರೂ ನೀರು ಡ್ರೈನೇಜ್‍ಗೆ ಹೋಗಬೇಕು. ಆಗ ರಸ್ತೆ ಸುರಕ್ಷಿತವಗಿರುತ್ತೆ. ಟಾರ್ ರಸ್ತೆ ಮೇಲೆ ನೀರು ಬಿದ್ರೆ ಹಾಳಾಗುತ್ತೆ. ಆದ್ರೆ ನಮ್ಮಲ್ಲಿ ರಸ್ತೆಯಿಂದ ನೀರು ಹೋಗೋದಕ್ಕೆ ಆಗದಂತೆ ಮೋರಿ ನಿರ್ಮಾಣವಾಗಿರುತ್ತೆ. ಚರಂಡಿ ವ್ಯವಸ್ಥೆಯಲ್ಲೇ ಸಮಸ್ಯೆಯಿದೆ ಅಂತ ಬೆಂಗಳೂರಿನ ಚರಂಡಿಗಳ ಚಿತ್ರಗಳನ್ನ ತೋರಿಸಿ ವಿವರಿಸಿದ್ದಾರೆ.

ಪರಿಹಾರ ಏನು?: ಅಮೆರಿಕದಲ್ಲಿ ಪೈಪ್ ಡ್ರೈನೇಜ್ ಸಿಸ್ಟಮ್ ಇದೆ. ರಸ್ತೆಯಿಂದ ನೀರು ಚೇಂಬರ್‍ಗೆ ಹೋದ ನಂತರ ಅದು ಪೈಪ್ ಮೂಲಕ ಹೋಗುತ್ತದೆ. ಅದನ್ನ ಗಿಡ ಬೆಳೆಸಲು ಬಳಸಿಕೊಳ್ಳಬಹುದು ಅಂತ ಅಮೆರಿಕದ ಚರಂಡಿ ವ್ಯವಸ್ಥೆಯ ಬಗ್ಗೆ ಚಿತ್ರಗಳ ಮೂಲಕ ಸೌರಭ್ ವಿವರಿಸಿದ್ದಾರೆ.

ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ: 

https://www.facebook.com/nimmaupendra/videos/1737351199894111/

 

Comments

Leave a Reply

Your email address will not be published. Required fields are marked *