ಅಭಿಮಾನಿಗಳಿಗೆ ಬಂಪರ್ ಆಫರ್ ಕೊಟ್ಟ ಪಡ್ಡೆಗಳ ಅರಸಿ ಸನ್ನಿ

ಬೆಂಗಳೂರು: ಅಖಿಲ ಭಾರತ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಸನ್ನಿಯನ್ನ ಕಣ್ಣಾರೆ ನೋಡಬೇಕು. ಅವರ ಜೊತೆ ಸಮಯ ಕಳಿಯಬೇಕು ಅಂದುಕೊಂಡಿದ್ದ ಅಭಿಮಾನಿಗಳ ಆಸೆಯನ್ನ ಸನ್ನಿ ಈಡೇರಿಸೋಕೆ ರೆಡಿಯಾಗಿದ್ದಾರೆ. ಆದರೆ ಸನ್ನಿಗೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ.

ಪಡ್ಡೆಗಳ ಅರಸಿ ಸನ್ನಿ ಲಿಯೋನ್ ತಮ್ಮ ಅಭಿಮಾನಿಗಳಿಗೊಂದು ಬಂಪರ್ ಆಫರ್ ಕೊಟ್ಟಿದ್ದು, ಒಂದು ಕೋಟಿ 68 ಲಕ್ಷ ಕೊಟ್ಟರೆ ಎರಡು ಗಂಟೆ ಕಾಲ ಸನ್ನಿಯ ಜೊತೆಗಿರಬಹುದು. ಸನ್ನಿ ತಮ್ಮಭಿಮಾನಿಗಳ ಆಸೆ ಪೂರೈಸಲು ರೆಡಿಯಾಗಿದ್ದಾರೆ. ಹರಾಜಿನ ಮೂಲಕ ಆಯ್ಕೆಯಾಗುವ ಕೆಲವು ಅಭಿಮಾನಿಗಳಿಗೆ ಈ ಅವಕಾಶ ಸಿಗಲಿದ್ದು, ಸನ್ನಿ ಜೊತೆ ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ಊಟ ಮಾಡಬಹುದು. ಊಟ ಉಚಿತವಾಗಿರುತ್ತೆ. ಆದರೆ ಮದ್ಯಪಾನಕ್ಕೆ ಅಭಿಮಾನಿ ಸೆಪರೇಟ್ ಬಿಲ್ ಪೇ ಮಾಡಬೇಕು. ಎರಡು ಗಂಟೆಯ ನಂತರ ಅಲ್ಲಿಂದ ಜಾಗ ಖಾಲಿಮಾಡಬೇಕು.

ಸನ್ನಿ ಅಭಿಮಾನಿಗೆ ಈ ಆಫರ್ ಕೊಟ್ಟಿದ್ದು, ಹಣ ಕೇಳುತ್ತಿರುವುದು ಸ್ವಂತ ಬಳಕೆಗಲ್ಲ. ಹರಾಜಿನಲ್ಲಿ ಸೇರುವ ಹಣವನ್ನ ಸನ್ನಿ ಅಮೆರಿಕಾ ಕ್ಯಾನ್ಸರ್ ಸೊಸೈಟಿ ಹಾಗೂ ಪೇಟಾಗೆ ನೀಡುವುದು ಸಜ್ಜಾಗಿದ್ದಾರೆ. ಆದರೆ ಆಯ್ಕೆಯಾಗುವ ಅಭಿಮಾನಿ ಕೆಲವು ರೂಲ್ಸ್ ಹಾಕಿದ್ದಾರೆ.

ಸನ್ನಿ ಭೇಟಿಗೆ ಇರುವ ಷರತ್ತುಗಳು:

* 18 ವರ್ಷ ಮೇಲ್ಪಟ್ಟಿರಬೇಕು.
* ಹರಾಜಿನಲ್ಲಿ ಗೆಲ್ಲಬೇಕು.
* ಫೋಟೋ ಮತ್ತು ಆಟೋಗ್ರಾಫ್ ಪಡೆಯಬಹುದು.
* ಉಚಿತ ಊಟದ ವ್ಯವಸ್ಥೆ ಇರುತ್ತೆ.
* ಸನ್ನಿಯನ್ನ ಟಚ್ ಮಾಡುವಂತಿಲ್ಲ.

ಸನ್ನಿ ಸಂಸಾರ, ಸಿನಿಮಾ, ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಸನ್ನಿ ಆಗಾಗ ಚಾರಿಟಿ ಜೊತೆ ಸೇರಿ ಹಣ ಸಂಗ್ರಹಿಸಿ ಒಳ್ಳೆಯ ಕಾರ್ಯಗಳಿಗೆ ಬಳಕೆ ಮಾಡುತ್ತಾರೆ. ಅದೇ ರೀತಿ ಇದೀಗ ಅಭಿಮಾನಿಗಳಿಗಾಗಿ ಈ ಬಾರಿ ಒಂದು ನೂತನ ಆಫರ್ ಕೊಟ್ಟಿದ್ದಾರೆ.

ಸನ್ನಿ ಜೊತೆ ಒಂದು ಫೋಟೋ ಸಿಕ್ಕರೆ ಸಾಕು ಅನ್ನೋದು ಹಲವರ ಆಶಯ. ಅದೇ ರೀತಿ ಕೋಟಿ ಖರ್ಚಾದರೂ ಸನ್ನಿ ಜೊತೆ ಊಟ ಮಾಡುವ ಅವಕಾಶ ಸಿಗುತ್ತಲ್ಲ ಎಂದು ಅನೇಕರು ಈಗಾಗಲೇ ಹರಾಜಿನಲ್ಲಿ ಪಾಲ್ಗೊಳ್ಳೊಕೆ ರೆಡಿಯಾಗಿ ನಿಂತಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *