ನನ್ನಿಂದ ನೋವಾಗಿದ್ದಲ್ಲಿ ಕ್ಷಮೆ ಇರಲಿ- ಕಿಚ್ಚ ಸುದೀಪ್

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯಾಗಬೇಕಿದ್ದ ಪೈಲ್ವಾನ್ ಚಿತ್ರದ ಧ್ವನಿ ಸುರಳಿ ಕಾರ್ಯಕ್ರಮವನ್ನು ಮುಂದೂಡಿದ್ದಕ್ಕೆ ಸುದೀಪ್ ತಮ್ಮ ಸ್ನೇಹಿತರ ಬಳಿ ಕ್ಷಮೆ ಕೇಳಿದ್ದಾರೆ.

ನಟ ಸುದೀಪ್ ಈ ಕುರಿತು ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. “ಎಲ್ಲ ಸ್ನೇಹಿತರ ಬಳಿ ನಾನು ಕ್ಷಮೆ ಕೇಳುತ್ತಿದ್ದೇನೆ. ಎಲ್ಲರೂ ನನ್ನನ್ನ ಕ್ಷಮಿಸಿ ಆಡಿಯೋ ಕಾರ್ಯಕ್ರಮವನ್ನು ಪೋಸ್ಟ್ ಪೋನ್ ಮಾಡುತ್ತಿದ್ದೇನೆ. ಖಂಡಿತವಾಗಿ ಹೀಗೆ ಮಾಡಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಆದರೆ ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡಬೇಕಿದೆ. ಹೀಗಾಗಿ ಈ ಎನರ್ಜಿಯನ್ನು ಅಲ್ಲಿಗೆ ಹಾಕಿ ಎಂದು ಎಲ್ಲ ಹುಡುಗರನ್ನು ಕೇಳಿಕೊಂಡಿದ್ದೇನೆ” ಎಂದಿದ್ದಾರೆ.

ನಾನು ಆಡಿಯೋ ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡುತ್ತಿಲ್ಲ, ಪೋಸ್ಟ್ ಪೋನ್ ಮಾಡುತ್ತಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಸಪೋರ್ಟ್ ಬೇಕು ಎಂದು ಚಿತ್ರತಂಡದ ಎಲ್ಲ ಕಲಾವಿದರ ಬಳಿ ಮನವಿ ಮಾಡಿಕೊಂಡಿದ್ದಾರೆ. ನನ್ನ ಮೇಲೆ ಬೇಜಾರು ಮಾಡಿಕೊಳ್ಳುವುದು ಅಥವಾ ಕೋಪ ಮಾಡಿಕೊಳ್ಳುವುದು ಮಾಡಬೇಡಿ. ನನ್ನಿಂದ ನೋವಾಗಿದ್ದಲ್ಲಿ ಕ್ಷಮೆ ಇರಲಿ. ಈ ಒಂದು ವಿಚಾರಕ್ಕೆ ನನ್ನೊಂದಿಗೆ ಇದ್ದೀರಾ ಎಂದು ನಾನು ನಂಬಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ.

ಸದ್ಯಕ್ಕೆ ಪೈಲ್ವಾನ್ ಆಡಿಯೋ ಲಾಂಚನ್ನು ಪೋಸ್ಟ್ ಪೋನ್ ಮಾಡಿದ್ದೇನೆ. ಇದು ಸಂಭ್ರಮಾಚಾರಣೆಯ ಸಮಯವಲ್ಲ. ಈ ಒಂದು ವಿಚಾರದಲ್ಲಿ ನನಗೆ ಸಪೋರ್ಟ್ ಮಾಡಿ, ಎಲ್ಲರಿಗೂ ಧನ್ಯವಾದಗಳು. ಮತ್ತೊಮ್ಮೆ ಎಲ್ಲರ ಬಳಿ ಸುದೀಪ್ ಕ್ಷಮೆಯಾಚಿಸಿದ್ದಾರೆ.

Comments

Leave a Reply

Your email address will not be published. Required fields are marked *