ಶೈನ್‍ಗೆ ವಾರ್ನಿಂಗ್ ಕೊಟ್ಟ ಸುದೀಪ್

ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ಶೈನ್ ಶೆಟ್ಟಿಗೆ ಕಿಚ್ಚ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ.

ಹೌದು..’ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಶೈನ್ ಶೆಟ್ಟಿಗೆ ಸುದೀಪ್ ಎಚ್ಚರಿಕೆ ಕೊಟ್ಟಿದ್ದಾರೆ. ಬಿಗ್‍ಬಾಸ್ ಒಂದು ಬಲೂನ್ ಟಾಸ್ಕ್ ಕೊಟ್ಟಿದ್ದರು. ಅದರ ಪ್ರಕಾರ ಹಗ್ಗದ ಮೂಲಕ ತಮ್ಮ ಚಿತ್ರವಿರುವ ಬಲೂನ್ ತೆಗೆದುಕೊಂಡು, ಹಗ್ಗದ ಮೂಲಕವೇ ವಾಪಸ್ ಬಂದು ಹೊರಗಡೆ ಕಟ್ಟಬೇಕಿತ್ತು.

ಅದರಂತೆಯೇ ಶೈನ್ ಬಲೂನ್ ತೆಗೆದುಕೊಂಡು ಬರುತ್ತಿದ್ದರು. ಆಗ ದೀಪಿಕಾ ಅಡ್ಡ ಬಂದು ಶೈನ್ ಧರಿಸಿದ್ದ ಕ್ಯಾಪ್ ಅನ್ನು ತಮ್ಮ ಕೈಯಿಂದ ಎಳೆದಿದ್ದಾರೆ. ಇದರಿಂದ ಅವರ ಮುಖ ಕ್ಯಾಪ್‍ನಿಂದ ಮುಚ್ಚಿಕೊಂಡಿತ್ತು. ಆಗ ಶೈನ್ ಹಗ್ಗದಿಂದ ಹೊರ ಬರುವ ಆತುರದಲ್ಲಿ ಕೆಳಗೆ ಜಂಪ್ ಮಾಡಿದ್ದಾರೆ. ಆಗ ಶೈನ್ ಉಲ್ಟಾ ನೆಲಕ್ಕೆ ಬಿದ್ದಿದ್ದರು. ಅದೃಷ್ಟವಶಾತ್ ಅವರಿಗೆ ಯಾವುದೇ ರೀತಿಯ ಪೆಟ್ಟಾಗಿಲ್ಲ.

ಈ ಗೇಮ್ ಬಗ್ಗೆ ಮಾತನಾಡಿ ಶೈನ್‍ಗೆ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ. ಆಟವಾಡುವಾಗ ತುಂಬಾ ಎಚ್ಚರಿಕೆಯಿಂದ ಆಟವಾಡಿ. ಆಟದಲ್ಲಿ ಏನೋ ಮಾಡೋಕೆ ಹೋಗಿ ಅಪಾಯಕ್ಕೆ ಸಿಲುಕಿಕೊಳ್ಳಬೇಡಿ. ಟಾಸ್ಕ್ ಮಧ್ಯೆ ನೀವು ಒಂದು ಹೆಜ್ಜೆ ಮುಂದೆ ಹೋಗಿ ಮಾಡುತ್ತೀರಾ. ಅದು ನಿಮಗೆ ಗೊತ್ತಾಗಲ್ಲ. ನಿಮಗಿಂತ ಟಾಸ್ಕ್ ಮುಖ್ಯ ಅಲ್ಲ. ನೀವು ಇದ್ದರೆ ಮಾತ್ರ ಟಾಸ್ಕ್, ಜೀವನ ಎಂದು ಸುದೀಪ್ ಎಚ್ಚರಿಕೆ ಕೊಟ್ಟಿದ್ದಾರೆ.

ಪ್ರತಿವಾರವೂ ತುಂಬಾ ಚೆನ್ನಾಗಿ ಆಟವಾಡುವ ಒಬ್ಬ ಸ್ಪರ್ಧಿಗೆ ಕಿಚ್ಚನ ಚಪ್ಪಾಳೆ ಸಿಗುತಿತ್ತು. ಈ ವಾರ ಚಂದನ್ ಆಚಾರ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಇನ್ನೂ ಈ ವಾರ ಮನೆಯಿಂದ ಹೊರ ಹೋಗಲು ಚಂದನ್ ಆಚಾರ್, ಚಂದನಾ, ಕಿಶನ್, ಭೂಮಿ ಶೆಟ್ಟಿ, ದೀಪಿಕಾ, ಹರೀಶ್ ರಾಜ್ ನಾಮಿನೇಟ್ ಆಗಿದ್ದರು. ಅವರಲ್ಲಿ ಶನಿವಾರ ಚಂದನ್ ಆಚಾರ್, ಭೂಮಿ ಶೆಟ್ಟಿ, ದೀಪಿಕಾ ದಾಸ್ ಸೇಫ್ ಆಗಿದ್ದಾರೆ. ಇನ್ನೂ ಚಂದನಾ, ಕಿಶನ್ ಮತ್ತು ಹರೀಶ್ ರಾಜ್ ಉಳಿದುಕೊಂಡಿದ್ದಾರೆ. ಈ ಮೂವರಲ್ಲಿ ಒಬ್ಬರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುತ್ತಾರೆ.

Comments

Leave a Reply

Your email address will not be published. Required fields are marked *