ಕಿಶನ್ ಕಣ್ಣೀರು ಹಾಕ್ತಿದ್ದಂತೆ ಜಾಕೆಟ್ ಬಿಚ್ಚಿ ಕೊಟ್ಟ ಕಿಚ್ಚ

ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ಡ್ಯಾನ್ಸರ್ ಕಿಶನ್ ವೇದಿಕೆಯ ಮೇಲೆ ಕಣ್ಣೀರು ಹಾಕಿದ ತಕ್ಷಣ ನಟ ಸುದೀಪ್ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಗಿಫ್ಟ್ ಆಗಿ ಕೊಟ್ಟಿದ್ದಾರೆ.

‘ಬಿಗ್‍ಬಾಸ್ ಸೀಸನ್ 7’ ಇನ್ನೂ ಕೆಲವು ವಾರಗಳಲ್ಲಿ ಫೈನಲ್ ಹಂತ ತಲುಪಲಿದೆ. ಈ ವಾರ ಬಿಗ್‍ಬಾಸ್ ಮನೆಯಿಂದ ಡ್ಯಾನ್ಸರ್ ಕಿಶನ್ ಹೊರ ಬಂದಿದ್ದಾರೆ. ಈ ವೇಳೆ ಕಿಶನ್ ವೇದಿಕೆಯಲ್ಲಿ ತಮ್ಮ ಬಿಗ್‍ಬಾಸ್ ಜರ್ನಿಯ ವಿಡಿಯೋವನ್ನು ನೋಡಿದ್ದಾರೆ. ಅದನ್ನು ನೀಡಿದ ತಕ್ಷಣ ಕಿಶನ್ ಕಣ್ಣೀರು ಹಾಕಿದ್ದಾರೆ. ಆಗ ಸುದೀಪ್ ಅವರನ್ನು ಅಪ್ಪಿಕೊಂಡು ಸಮಾಧಾನ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಕಿಶನ್, “ಸ್ವಲ್ಪ ಬೇಜಾರುತ್ತಿದೆ, ಪ್ರತಿಯೊಂದು ದಿನವೂ ಚೆನ್ನಾಗಿ ಆಡಿದ್ದೀನಿ ತುಂಬಾ ಸಂತಸವಾಗಿದೆ. ಬಿಗ್‍ಬಾಸ್ ಮನೆಯಲ್ಲಿ ನನ್ನನ್ನು ನಾನೇ ಅರ್ಥ ಮಾಡಿಕೊಂಡೆ. ಕುಟುಂಬ ಅಂದರೆ ಏನು ಅಂತ ಅರ್ಥವಾಯಿತು. ಬಿಗ್‍ಬಾಸ್ ಮನೆಯಲ್ಲಿ ಮಾತನಾಡುವುದು ತುಂಬಾ ಮುಖ್ಯ ಅನ್ನಿಸುತ್ತದೆ. ಹೇಗೆ ಮಾತನಾಡುತ್ತಾರೆ ಎಂಬುದು ಮುಖ್ಯ ಆಗುತ್ತದೆ. ಅದು ಶೈನ್ ಶೆಟ್ಟಿಗೆ ಗೊತ್ತಿತ್ತು” ಎಂದರು.

ನನಗೆ ಇಷ್ಟು ದಿನ ಹೇಗೆ ಮುಗಿಯಿತು ಎಂಬುದೇ ಗೊತ್ತಾಗಲಿಲ್ಲ. ಈ ಮನೆಗೆ ಏನು ಬೇಕೋ ಅದನ್ನು ನಾನು 100 ಪರ್ಸೆಂಟ್ ಕೊಟ್ಟಿದ್ದೀನಿ. ತುಂಬಾನೆ ಸಾಧನೆ ಮಾಡಿದ್ದೀನಿ. ಏನನ್ನು ಮಿಸ್ ಮಾಡಿಕೊಂಡಿಲ್ಲ. ಮನೆಯಲ್ಲಿ ನಾನು ನಾನಾಗಿ, ಪ್ರಾಮಾಣಿಕವಾಗಿದ್ದೆ. ಈ ಮನೆಯಲ್ಲಿ ನಾನು ಎಲ್ಲರಿಗೂ ಪ್ರೀತಿ ಕೊಟ್ಟಿದ್ದೀನಿ. ಆದರೆ ಅವರಿಂದ ಅಷ್ಟೇ ಪ್ರೀತಿ ಸಿಕ್ಕಿಲ್ಲ ಎಂದರು.

ನಮ್ಮ ತಂದೆ ಬಂದಿದ್ದು ನನಗೆ ಖುಷಿ ಆಯಿತು. ನನಗೆ ಬಟ್ಟೆ ಎಂದರೆ ಇಷ್ಟ, ಪ್ರಿಯಾಂಕಾಗೆ ಜಾಕೆಟ್ ಕೊಟ್ಟಾಗ ಎಮೋಷನಲ್ ಆದೆ ಎಂದು ಕಣ್ಣೀರು ಹಾಕಿದರು. ತಕ್ಷಣ ಸುದೀಪ್ ವೇದಿಕೆ ಮೇಲೆ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಕಿಶನ್‍ಗೆ ಹಾಕಿದ್ದಾರೆ. ನಂತರ ಕಿಶನ್ ತೊಟ್ಟಿದ್ದ ಜಾಕೆಟ್ ಅನ್ನು ಸುದೀಪ್ ಹಾಕಿಕೊಂಡರು. ಕೊನೆಗೆ ಆ ಜಾಕೆಟ್ ನಿಮಗೆ ಗಿಫ್ಟ್ ಎಂದು ಸುದೀಪ್ ಹೇಳಿದರು.

Comments

Leave a Reply

Your email address will not be published. Required fields are marked *