ಫ್ಯಾನ್ಸ್‌ಗೆ ಸೃಜನ್ ಲೋಕೇಶ್ ಗುಡ್ ನ್ಯೂಸ್- ಮತ್ತೆ ಶುರುವಾಗಲಿದೆ ‘ಮಜಾ ಟಾಕೀಸ್’

ಕಿರುತೆರೆಯ ಅತೀ ದೊಡ್ಡ ಶೋ ‘ಬಿಗ್ ಬಾಸ್ ಕನ್ನಡ 11’ (Bigg Boss Kannada 11) ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಬೆನ್ನಲ್ಲೇ ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ಸಿಕ್ಕಿದೆ. ‘ಮಜಾ ಟಾಕೀಸ್’ ಶೋ ಮತ್ತೆ ಶುರುವಾಗುತ್ತಿದೆ ಎಂದು ಸ್ವತಃ ಸೃಜನ್ ಲೋಕೇಶ್ (Srujan Lokesh) ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಕುರಿತ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದನ್ನೂ ಓದಿ:27 ವರ್ಷದ ಹಾಲಿವುಡ್ ನಟಿ ಜೊತೆ ಧನುಷ್ ರೊಮ್ಯಾನ್ಸ್

ಟೆನ್ಷನ್ ಬಿಟ್ಟಾಕಿ ನಗೋಕೆ ರೆಡಿಯಾಗಿ ಎಂದು ಮೆಸೇಜ್ ಹೇಳುತ್ತಾ ‘ಮಜಾ ಟಾಕೀಸ್’ (Maja Talkies) ಬರುವ ಬಗ್ಗೆ ಸೃಜನ್ ಅಧಿಕೃತವಾಗಿ ತಿಳಿಸಿದ್ದಾರೆ. 2015ರಲ್ಲಿ ಆರಂಭವಾದ ಈ ಶೋ ಇನ್ನೂ ಕೆಲವೇ ದಿನಗಳಲ್ಲಿ 10 ವರ್ಷಗಳು ಪೂರೈಸಲಿದೆ. ಸೃಜನ್ ನಿರೂಪಣೆಯಲ್ಲಿ ಅಪರ್ಣಾ, ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್, ರೆಮೋ, ಇಂದ್ರಜಿತ್ ಲಂಕೇಶ್ ಸೇರಿದಂತೆ ಅನೇಕರು ಪ್ರೇಕ್ಷಕರಿಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಈ ಬಾರಿ ಅಪರ್ಣಾ ಅಗಲಿಕೆ ಎಲ್ಲರನ್ನೂ ಕಾಡಲಿದೆ. ಅವರು ವರಲಕ್ಷ್ಮಿ ಪಾತ್ರದ ಮೂಲಕ ಎಲ್ಲರ ಮನ ಗೆದ್ದಿದ್ದರು.

ಇನ್ನೂ ‘ಮಜಾ ಟಾಕೀಸ್’ನಿಂದ ಸೃಜನ್ ಬ್ರೇಕ್ ಪಡೆಯುವ ನಿರ್ಧಾರ ಮಾಡಿದರು. ಈಗ ಮತ್ತೆ ಬರುವ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಆದರೆ ಯಾವಾಗ ಎಂಬುದು ರಿವೀಲ್ ಆಗಿಲ್ಲ. ಈ ಕುರಿತು ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.