ತಮಿಳುನಾಡಿನಲ್ಲೂ ಹೌಸ್‍ಫುಲ್ ದಾಖಲೆ ಬರೆದ ಕನ್ನಡ ಸಿನಿಮಾಗೆ ವರ್ಷದ ಸಂಭ್ರಮ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ತೆರೆಕಂಡು ಇವತ್ತಿಗೆ ಒಂದು ವರ್ಷವಾಗಿದೆ.

ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ನೆರೆಯ ರಾಜ್ಯ ತಮಿಳುನಾಡಿನಲ್ಲಿಯೂ ಟಗರು ಸಿನಿಮಾ ಭಾರೀ ಸದ್ದು ಮಾಡಿತ್ತು. ಈ ಮೂಲಕ ತಮಿಳುನಾಡಿನಲ್ಲಿ ಹೌಸ್‍ಫುಲ್ ಆಗಿದ್ದ ಕನ್ನಡ ಮೊದಲ ಸಿನಿಮಾ ಹೆಮ್ಮೆಯನ್ನು ಗಿಟ್ಟಿಸಿಕೊಂಡಿತ್ತು.

ತಮಿಳುನಾಡಿನ ಯುವಕರು ಟಗರು ಸಿನಿಮಾಗೆ ಫುಲ್ ಫಿದಾ ಆಗಿದ್ದರು. ತಮ್ಮ ಬೈಕ್‍ಗಳ, ಟೀ ಶರ್ಟ್ ಹಿಂದೆ ಟಗರು ಹಾಗೂ ಶಿವರಾಜ್ ಕುಮಾರ್ ಚಿತ್ರ ಹಾಕಿಸಿಕೊಂಡಿದ್ದರು. ಕೆಲ ಅಭಿಮಾನಿಗಳು ಬ್ಯಾನರ್, ಫ್ಲೆಕ್ಸ್ ಗಳನ್ನು ಹಾಕಿಸಿ ಶಿವರಾಜ್ ಕುಮಾರ್ ಅಭಿನಯಕ್ಕೆ ಗೌರವ ಸಲ್ಲಿಸಿದ್ದರು.

 

ಅಭಿಮಾನಿಯೊಬ್ಬ ಹೊಸೂರಿನ ರಾಘವೇಂದ್ರ ಚಿತ್ರಮಂದಿರ ಹೌಸ್‍ಫುಲ್ ಆಗಿರುವ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬೈಕ್, ಟಿ ಶರ್ಟ್ ಮೇಲೆ ಸಿನಿಮಾ ಫೋಟೋಗಳನ್ನು ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಜೊತೆಗೆ ಶಿವರಾಜ್ ಕುಮಾರ್ ಮಚ್ಚು ಹಿಡಿದಂತೆ ತಾವು ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

ರೌಡಿಗಳನ್ನು ಮಟ್ಟಹಾಕುವ ಕಥೆ ಆಧಾರಿತ ಟಗರು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರತಿಕ್ಷಣಕ್ಕೂ ಪ್ರೇಕ್ಷಕರಲ್ಲಿ ಕುತುಹಲ ಹೆಚ್ಚಿಸುವ ಟಗರು ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *