ಮೈಸೂರಿನಲ್ಲಿ ‘ರುಸ್ತುಂ’ ಚಿತ್ರ ವೀಕ್ಷಿಸಿದ ಶಿವಣ್ಣ

ಮೈಸೂರು: ಅರಮನೆ ನಗರಿ ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ನಟ ಶಿವರಾಜ್ ಕುಮಾರ್ ಅವರು ತಾವು ಅಭಿನಯಸಿದ್ದ ‘ರುಸ್ತುಂ’ ಚಿತ್ರವನ್ನು ಪತ್ನಿ ಗೀತಾ ಅವರೊಂದಿಗೆ ವೀಕ್ಷಿಸಿದ್ದಾರೆ.

ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಇದ್ದ ಕಾರಣ ಶುಕ್ರವಾರ ಸಿನಿಮಾ ತೆರೆ ಕಂಡರೂ ಶಿವರಾಜ್ ಕುಮಾರ್ ಅವರಿಗೆ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶನಿವಾರ ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ಪತ್ನಿ ಗೀತಾ ಜೊತೆ ಶಿವಣ್ಣ ಸಿನಿಮಾ ವೀಕ್ಷಿಸಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಿವರಾಜ್ ಕುಮಾರ್, ‘ರುಸ್ತುಂ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಸ್ಕ್ರೀನ್ ಪ್ಲೇ ವೇಗವಾಗಿ ಇರುವುದು ಜನರಿಗೆ ಇಷ್ಟವಾಗಿದೆ. ಇದು ರವಿವರ್ಮಾ ಅವರ ಮೊದಲ ನಿರ್ದೇಶನದ ಚಿತ್ರ ಎಂದು ಅನ್ನಿಸುತ್ತಿಲ್ಲ. ಅಷ್ಟು ಚೆನ್ನಾಗಿ ಚಿತ್ರದ ವೇಗವಿದೆ ಎಂದರು.

ಇದೇ ವೇಳೆ ತಮ್ಮ ಚಿತ್ರಗಳು ಪರಭಾಷೆಗೆ ರಿಮೇಕ್ ಆಗುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಶಿವರಾಜ್ ಕುಮಾರ್, ನನ್ನ ಹಲವು ಚಿತ್ರಗಳು ಪರಭಾಷೆಗೆ ರಿಮೇಕ್ ಆಗಿವೆ. ಈಗ ‘ರುಸ್ತುಂ’ ಚಿತ್ರವೂ ರಿಮೇಕ್ ಆಗುತ್ತದೆ. ಇದು ಸಂತೋಷ ತರುವ ವಿಚಾರವಾಗಿದೆ. ಅಭಿಮಾನಿಗಳ ಜೋಶ್‍ನಿಂದ ನನಗೆ ಸದಾ ಎನರ್ಜಿ ಬರುತ್ತಿದೆ. ಅದೇ ಶಕ್ತಿ ಚಿತ್ರದ ಪಾತ್ರದಲ್ಲಿ ಕಾಣುತ್ತದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *