ನಡುರಸ್ತೆಯಲ್ಲೇ ನಟಿಯ ಪ್ರಪೋಸ್- ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ನಟ

-ಜನಸಂದಣಿಯಲ್ಲಿಯೇ ‘ಐ ಲವ್ ಯು’ ಎಂದ ನಟಿ

ಚೆನ್ನೈ: ಪ್ರೀತಿ ಯಾವಾಗ ಅರಳುತ್ತೆ ಎಂಬುವುದೇ ಗೊತ್ತೆ ಆಗಲ್ಲ. ಇಬ್ಬರಲ್ಲೂ ಪ್ರೀತಿ ಇದ್ರೆ ತಮ್ಮ ಪ್ರೇಮ ನಿವೇದನೆಯನ್ನ ರೊಮ್ಯಾಂಟಿಕ್ ಜಾಗದಲ್ಲಿ, ಜೀವನದಲ್ಲಿ ಮರೆಯಲಾಗದ ಕ್ಷಣ ಆಗಿರಬೇಕೆಂದು ಪ್ಲಾನ್ ಮಾಡಿಕೊಂಡಿರುತ್ತಾರೆ. ಆದ್ರೆ ತಮಿಳಿನ ಕಿರುತರೆ ನಟಿ ನಡುರಸ್ತೆಯಲ್ಲಿಯೇ ಸಹ ನಟನಿಗೆ ತಮ್ಮ ‘ಐ ಲವ್ ಯು’ ಹೇಳಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಕಿರುತೆರೆಯ ನಟ ಸಂಜೀವ್ ಕಾರ್ತಿಕ್ ಮತ್ತು ಅಲ್ಯ ಮಾನಸ ಪ್ರೀತಿಸಿ ಮದ್ವೆಯಾಗಿದ್ದಾರೆ. ಇತ್ತೀಚೆಗೆ ದಂಪತಿಗೆ ಗಂಡು ಮಗು ಸಹ ಆಗಿದೆ. ‘ರಾಜಾರಾಣಿ’ ಸಿರೀಸ್ ನಲ್ಲಿ ಇಬ್ಬರ ಕೆಮಿಸ್ಟ್ರಿಗೆ ಅಭಿಮಾನಿಗಳು ಸಹ ಫಿದಾ ಆಗದ್ದರು. ರೀಲ್ ಲೈಫ್‍ನಲ್ಲಿ ಸತಿ-ಪತಿಗಳಾಗಿದ್ದ ಜೋಡಿ ನಿಜ ಜೀವನದಲ್ಲಿಯೂ ಪ್ರೇಮದ ಬಲೆಯಲ್ಲಿ ಸಿಲುಕಿ, ಕುಟುಂಬಸ್ಥರ ವಿರೋಧದ ನಡುವೆಯೂ ಮದುವೆಯಾದರು.

https://www.instagram.com/p/B4t39JRHI7E/

ಇಂದು ಸಂಜೀವ್ ಕಾರ್ತಿಕ್ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಳ್ಳುವ ಮೂಲಕ ಪತ್ನಿ ತಮಗೆ ಹೇಗೆ ಪ್ರಪೋಸ್ ಮಾಡಿದ್ರು ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ. ಜನಸಂದಣಿಯಿಂದ ತುಂಬಿದ ರಸ್ತೆಯಲ್ಲಿ ಅಲ್ಯ ಮಾನಸ ಪ್ರಪೋಸ್ ಮಾಡಿದ್ದಾರೆ. ರಸ್ತೆಯ ಒಂದು ಬದಿಯಲ್ಲಿ ಮಾನಸ ನಿಂತಿದ್ರೆ, ಮತ್ತೊಂದು ಬದಿಯಲ್ಲಿ ಕಾರ್ತಿಕ್ ನಿಂತಿದ್ದಾರೆ. ಅಲ್ಲಿಂದಲೇ ಜೋರಾಗಿ ಕೂಗಿರುವ ಮಾನಸ, ಐ ಲವ್ ಯು ಎಂದು ಹೇಳುವ ಮೂಲಕ ಪ್ರೇಮ ನಿವೇದನೆ ಮಾಡಿದ್ದಾರೆ.

https://www.instagram.com/p/B_rIVRen_sU/?utm_source=ig_embed&utm_campaign=embed_video_watch_again

ವಿಡಿಯೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಸಂಜೀವ್ ಕಾರ್ತಿಕ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿದ್ದು ಖಾಸಗಿ ಜೀವನದ ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ಕ್ಯೂಟ್ ಜೋಡಿಯನ್ನ ‘ರಾಜಾರಾಣಿ’ ಎಂದು ಜನರು ಗುರುತಿಸುತ್ತಾರೆ.

https://www.instagram.com/p/B54g3OsHsV5/

Comments

Leave a Reply

Your email address will not be published. Required fields are marked *