ರಿಷಬ್ ಫ್ಯಾನ್ಸ್‌ಗೆ ಗುಡ್ ನ್ಯೂಸ್, ‘ಕಾಂತಾರ 2’ ಮೊದಲ ಡ್ರಾಫ್ಟ್ ರೆಡಿ

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ (Kantara) ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ಪ್ರಪಂಚದೆಲ್ಲೆಡೆ ಸದ್ದು ಮಾಡ್ತು. ಇದೀಗ ಕಾಂತಾರ ಪಾರ್ಟ್ 2ಗಾಗಿ ಕಾಯ್ತಿರುವ ಫ್ಯಾನ್ಸ್ ಸಿಹಿಸುದ್ದಿ ಸಿಕ್ಕಿದೆ. ಕಾಂತಾರ ಪಾರ್ಟ್ 2  (Kantara 2) ಸಿನಿಮಾದ ಕೆಲಸ ಯಾವ ಹಂತದಲ್ಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್(Hombale Films) ನಿರ್ಮಾಣದಲ್ಲಿ ಕಾಂತರ ಚಿತ್ರ ಮೂಡಿ ಬಂದಿತ್ತು. ರಿಷಬ್‌ಗೆ ಸಪ್ತಮಿ ಗೌಡ (Saptami Gowda) ನಾಯಕಿಯಾಗಿ ನಟಿಸಿದ್ದರು. ದೈವ ಕಥೆಯುಳ್ಳ ಈ ಚಿತ್ರ ಸಕ್ಸಸ್ ಕಂಡಿತ್ತು.

‘ಕಾಂತಾರ’ (Kantara) ಸಿನಿಮಾದ ಪ್ರೀಕ್ವೆಲ್, ಸ್ಕ್ರಿಪ್ಟ್ ಮೊದಲ ಡ್ರಾಫ್ಟ್ ಫೈನಲ್ ಆಗಿದೆಯಂತೆ. ರಿಷಬ್ ಶೆಟ್ಟಿ & ಅವರ ಟೀಂಗೆ ಅವರ ಮೊದಲ ಡ್ರಾಫ್ಟ್ ಬಗ್ಗೆ ತೃಪ್ತಿ ಇದೆ ಎನ್ನಲಾಗುತ್ತಿದೆ. ಅವರು ಮತ್ತೆ ಹೆಚ್ಚಿನ ಸಮಯ ತೆಗೆದುಕೊಂಡು ಸ್ಕ್ರಿಪ್ಟ್ ಕಡೆ ಗಮನ ವಹಿಸಲಿದ್ದಾರೆ. ಎಲ್ಲಾದರೂ ಬದಲಾವಣೆ ಅಗತ್ಯವಿದೆ ಎನಿಸಿದರೆ ಮತ್ತೆ ಬದಲಾಗುವ ಸಾಧ್ಯತೆಯಿದೆ. ಇದರ ಜೊತೆಗೆ ಶೂಟಿಂಗ್‌ಗೆ ಸ್ಥಳ ಹುಡುಕುವ ಕೆಲಸ ನಡೆಯುತ್ತಿದೆ. ಮಳೆಗಾಲದಲ್ಲಿ ಶೂಟಿಂಗ್ ನಡೆಯುವ ನಿರೀಕ್ಷೆಯಿದೆ.‌ ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನನ್ನರಸಿ ರಾಧೆ’ ನಟಿ ಸಹನಾ ಶೆಟ್ಟಿ

‘ಕಾಂತಾರ’ (Kantara) ಸಿನಿಮಾ ನೋಡಿದ ಕಥೆಯ ಹಿಂದೆ ಏನಾಗಿತ್ತು ಎಂದು ಪಾರ್ಟ್ 2ನಲ್ಲಿ ನೋಡಬಹುದಾಗಿದೆ. ‘ಕಾಂತಾರ’ 2ನಲ್ಲಿ ಯಾರೆಲ್ಲಾ ಕಲಾವಿದರು ಇರುತ್ತಾರೆ ಎಂಬ ಕುತೂಹಲವಿದೆ.