ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಬಗ್ಗೆ ಕುತೂಹಲ ಕುದಿಯಲಾರಂಭಿಸಿದೆ. ಆದರಿದು ಕನ್ನಡಕ್ಕೆ ಮಾತ್ರವೇ ಸೀಮಿತವಾಗದೆ ಬೇರೆ ಭಾಷೆಗಳಿಗೂ ಹಬ್ಬಿಕೊಂಡಿದೆ. ತಮಿಳುನಾಡಿನಲ್ಲಿಯೂ ಈ ಚಿತ್ರಕ್ಕಾಗಿ ಯಶ್ ಅಭಿಮಾನಿಗಳು ಕಾತರರಾಗಿರೋ ವಿಚಾರ ಈ ಹಿಂದೆ ಜಾಹೀರಾಗಿತ್ತು. ಈಗ ಹೊರ ಬಿದ್ದಿರೋದು ಕನ್ನಡದ ಅಣ್ತಮ್ಮನ ಚಿತ್ರದ ಬಗ್ಗೆ ತೆಲುಗು ನಾಡಲ್ಲಿ ಎದ್ದಿರೋ ಸಂಚಲನದ ಸುದ್ದಿ!

ತೆಲುಗಿನಲ್ಲಿಯೂ ಯಶ್ ಅಭಿನಯದ ಕೆಜಿಎಫ್ ಬಗ್ಗೆ ವಿಪರೀತ ಕ್ರೇಜ್ ಆರಂಭವಾಗಿದೆ. ಇದಕ್ಕೆ ಕಾರಣವಾಗಿರೋದು ರಾಮ್‍ಚರಣ್ ಅಭಿಮಾನಿಗಳು. ರಾಮ್ ಚರಣ್ ಅಭಿಮಾನಿಗಳು ಚಿತ್ರಕ್ಕೆ ಭರ್ಜರಿ ಪ್ರಚಾರ ಕೊಡಲಾರಂಭಿಸಿದ್ದಾರೆ. ಇದಲ್ಲದೇ ರಾಮ್ ಚರಣ್ ಅವರು ರಂಗಸ್ಥಳಂ ಚಿತ್ರದಲ್ಲಿ ಗೆದ್ದಂತೆಯೇ, ಯಶ್ ಕೂಡಾ ಕೆಜಿಎಫ್ ಮೂಲಕ ಗೆಲ್ಲಲಿದ್ದಾರೆಂಬ ಭವಿಷ್ಯವನ್ನೂ ಹೇಳಿದ್ದಾರೆ.

ರಾಮ್ ಚರಣ್ ರಂಗಸ್ಥಳಂ ಚಿತ್ರದ ಮೂಲಕ ಹಳೇ ಕಥೆಯ ಪಾತ್ರವೊಂದಕ್ಕೆ ಜೀವ ತುಂಬಿದ್ದದರು. ಯಶ್ ಅಭಿನಯದ ಕೆಜಿಎಫ್ ಕೂಡಾ ಅಂಥಾದ್ದೇ ಕಥಾನಕ ಹೊಂದಿದೆ. ರಾಮ್ ಚರಣ್ ಅವರಂತೆಯೇ ಯಶ್ ಭಿನ್ನ ಗೆಟಪ್ಪುಗಳು ಮಿಂಚುತ್ತಿವೆ. ಆದ್ದರಿಂದ ಈ ಚಿತ್ರಕ್ಕೆ ರಂಗಸ್ಥಳಂನಂಥಾದ್ದೇ ಗೆಲುವು ಸಿಗಲಿದೆ ಎಂಬುದು ರಾಮ್ ಚರಣ್ ಅಭಿಮಾನಿಗಳ ಅಭಿಪ್ರಾಯ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply