ಟಾಲಿವುಡ್ ನಟ ರಾಮ್‌ಚರಣ್‌ಗೆ ಗೌರವ ಡಾಕ್ಟರೇಟ್

ತೆಲುಗಿನ ಸ್ಟಾರ್ ನಟ ರಾಮ್‌ ಚರಣ್ (Ram Charan) ಚೆನ್ನೈನ ವೆಲ್ಸ್ ವಿಶ್ವವಿದ್ಯಾಲಯದಿಂದ ಏಪ್ರಿಲ್ 13ರಂದು ಗೌರವ ಡಾಕ್ಟರೇಟ್ ಪಡೆದಿದ್ದಾರೆ. ವೆಲ್ಸ್ ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳಲ್ಲಿ ಪ್ರತಿಷ್ಠಿತ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡಲು ಹೆಸರುವಾಸಿಯಾಗಿದೆ. ಇದೀಗ ವಿಶ್ವವಿದ್ಯಾಲಯವು ಮನರಂಜನಾ ಕ್ಷೇತ್ರದಲ್ಲಿನ ಸೇವೆಗಾಗಿ ರಾಮ್‌ಚರಣ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದಾರೆ. ಇದನ್ನೂ ಓದಿ:ದಳಪತಿ ವಿಜಯ್‌ಗೆ ನಾಯಕಿಯಾಗಿ ನಟಿಸಿದ್ದ ಸಿನಿಮಾವನ್ನು ಸ್ಮರಿಸಿದ ಪ್ರಿಯಾಂಕಾ ಚೋಪ್ರಾ

ಇದಕ್ಕೂ ಮೊದಲು, ಎಕ್ಸ್‌ನಲ್ಲಿ ವೆಲ್ಸ್ ವಿಶ್ವವಿದ್ಯಾಲಯ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿತ್ತು. ನಮ್ಮ 14ನೇ ವಾರ್ಷಿಕ ಘಟಿಕೋತ್ಸವಕ್ಕೆ ಡೈನಾಮಿಕ್ ಸ್ಟಾರ್ ರಾಮ್‌ಚರಣ್ ಅವರನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ ಎಂದು ಬರೆದುಕೊಂಡಿತ್ತು. ತಮ್ಮ ನೆಚ್ಚಿನ ನಾಯಕನಿಗೆ ಸಿಕ್ಕ ಗೌರವ ಕಂಡು ರಾಮ್ ಚರಣ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ದಳಪತಿ ವಿಜಯ್‌ಗೆ ನಾಯಕಿಯಾಗಿ ನಟಿಸಿದ್ದ ಸಿನಿಮಾವನ್ನು ಸ್ಮರಿಸಿದ ಪ್ರಿಯಾಂಕಾ ಚೋಪ್ರಾ

ರಾಮ್ ಚರಣ್- ಜಾನ್ವಿ ಕಪೂರ್ (Janhvi Kapoor) ನಟನೆಯ ಹೊಸ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನೆರವೇರಿತ್ತು. ಈ ಇವೆಂಟ್‌ಗೆ ಮೆಗಾಸ್ಟಾರ್ ಚಿರಂಜೀವಿ, ಬೋನಿ ಕಪೂರ್, ಸುಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದ್ದರು.

ರಾಮ್ ಚರಣ್ ನಟನೆಯ ಹೊಸ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರೀಕರಣದಲ್ಲಿ ಮೆಗಾಸ್ಟಾರ್ ಪುತ್ರನ ಜೊತೆ ಜಾನ್ವಿ ಮಾತನಾಡುತ್ತಿರುವ ಫೋಟೋಗಳು ಸದ್ದು ಮಾಡುತ್ತಿದೆ. ಇಬ್ಬರು ಜೊತೆಯಿರುವ ಫೋಟೋ ನೋಡಿ ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಈ ವೇಳೆ, ಜಾನ್ವಿ ತಂದೆ ಬೋನಿ ಕಪೂರ್ ಕೂಡ ಶೂಟಿಂಗ್ ಸೆಟ್‌ಗೆ ಹಾಜರಿ ಹಾಕಿದ್ದಾರೆ.

ಅಂದಹಾಗೆ, ರಾಮ್‌ಚರಣ್ ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಬುಚ್ಚಿಬಾಬು ನಿರ್ದೇಶನದ ಇನ್ನು ಹೆಸರಿಡದ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಎ. ಆರ್ ರೆಹಮಾನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಆರ್.ರತ್ನವೇಲು ಛಾಯಾಗ್ರಹಣ, ಆಂಟೋನಿ ರುಬಿನ್ ಸಂಕಲನ ಚಿತ್ರಕ್ಕಿದೆ. ಚಂದ್ರಬೋಸ್, ಆನಂತ ಶ್ರೀರಾಮ್, ಬಾಲಾಜಿ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.