ಸಿನಿಮಾಗೆ ಬ್ರೇಕ್, ಮಾಲ್ಡೀವ್ಸ್‌ನಲ್ಲಿ ರಜನಿಕಾಂತ್

ಕಾಲಿವುಡ್‌ (Kollywood)  ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟು ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ತಲೈವಾ ಸದಾ ಸಿನಿಮಾ- ಕುಟುಂಬ ಅಂತಾ ಬ್ಯುಸಿಯಾಗಿರುತ್ತಾರೆ. ಬ್ರೇಕ್ ತೆಗೆದುಕೊಂಡು ದೂರದ ದೇಶಕ್ಕೆ ಹೋಗೋದು ತೀರಾ ವಿರಳ. ಹೀಗಿರುವಾಗ ಒಪ್ಪಿಕೊಂಡಿರುವ ಸಿನಿಮಾಗಳಿಗೆ ಶೂಟಿಂಗ್ ಮುಗಿಸಿಕೊಟ್ಟು, ತಲೈವಾ ರಿಲಾಕ್ಸ್ ಮೂಡ್‌ಗೆ ಜಾರಿದ್ದಾರೆ.

ಚೆನ್ನೈ ಟು ಮಾಲ್ಡೀವ್ಸ್‌ಗೆ (Maldives) ಲ್ಯಾಂಡ್ ಆಗಿರುವ ಫೋಟೋದಿಂದ ಹಿಡಿದು ಬೀಚ್ ಬಳಿ ತಲೈವಾ ಓಡಾಡುತ್ತಿರುವ ಫೋಟೋಗಳು ಸಖತ್ ಸದ್ದು ಮಾಡುತ್ತಿದೆ. ಕೆಲಸ ಒತ್ತಡವೆನ್ನೆಲ್ಲಾ ಮರೆತು ಖುಷಿಯಾಗಿ ಸಮಯ ಕಳೆಯುತ್ತಿದ್ದಾರೆ. ಇದನ್ನೂ ಓದಿ:ಅಪಘಾತದಿಂದ ಚೇತರಿಸಿಕೊಂಡ್ರಾ ಸಾಯಿ ಧರಂ ತೇಜ್- ನಟ ಹೇಳೋದೇನು?

ರಜನಿಕಾಂತ್ ಅವರ ವಯಸ್ಸು ಈಗ 72. ಈ ವಯಸ್ಸಿನಲ್ಲೂ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ ‘ಜೈಲರ್’ (Jailer) ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಗುತ್ತಿದೆ. ಅವರ ನಟನೆಯ ಮತ್ತೊಂದು ಸಿನಿಮಾ ‘ಲಾಲ್ ಸಲಾಂ’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ಅವರ ಮಗಳು ಐಶ್ವರ್ಯಾ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕವೇ ಅವರು ವೆಕೇಷನ್ ತೆರಳಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]