ದಾವಣಗೆರೆಯ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಿದ ಪವರ್ ಸ್ಟಾರ್!

ಬೆಂಗಳೂರು: ದಾವಣಗೆರೆಯ ಪುಟ್ಟ ಅಭಿಮಾನಿಯನ್ನು ಆಸೆಯನ್ನು ಪುನೀತ್ ರಾಜ್‍ಕುಮಾರ್ ಕಂಠೀರವ ಸ್ಟುಡಿಯೋದಲ್ಲಿ ಈಡೇರಿಸಿದ್ದಾರೆ.

ಮಾರ್ಚ್ 17ರಂದು ನಟ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವಿತ್ತು. ಈ ವೇಳೆ ತನ್ನ ಎರಡೂ ಕಿಡ್ನಿಗಳನ್ನು ಕಳೆದುಕೊಂಡಿರೋ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಳಸಾಲ ಬಡಾವಣೆಯಲ್ಲಿ ವಾಸವಾಗಿರುವ ಪುಟ್ಟ ಬಾಲಕಿ ಪ್ರೀತಿ ನೆಚ್ಚಿನ ನಾಯಕನನ್ನು ನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಳು.

ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡುವುದರ ಜೊತೆ ಪುನೀತ್ ರಾಜ್‍ಕುಮಾರಿಗೂ ಈ ವಿಷಯವನ್ನ ಮುಟ್ಟಿಸಿತ್ತು. ಈ ವಿಚಾರಕ್ಕೆ ಸ್ಪಂದಿಸಿದ ಪುನೀತ್ ಇಂದು ಪ್ರೀತಿ ಕುಟುಂಬವನ್ನ ಭೇಟಿ ಮಾಡಿದ್ದಾರೆ. ಕಂಠೀರವ ಸ್ಟುಡಿಯೋಗೆ ಕರೆಸಿ ಪ್ರೀತಿ ಜೊತೆ ಮಾತನಾಡಿದ್ದಾರೆ.

ಖುಷಿಯಾಯ್ತು: ಹುಷಾರಾಗು, ಚೆನ್ನಾಗಿ ಓದು, ಕಿಡ್ನಿ ಬಗ್ಗೆ ಯೋಚನೆ ಮಾಡ್ಬೇಡ. ಹುಷಾರಾಗೋವಂಗೆ ಮಾಡ್ತೀನಿ ಅಂತಾ ಹೇಳಿದ್ರು. ಅವರನ್ನೂ ಬೇಟಿ ಮಾಡಿ ತುಂಬಾ ಖುಷಿಯಾಯ್ತು. ಅವರನ್ನು ಭೇಟಿ ಮಾಡಿ ಮಾತಾನಾಡಿಸ್ಬೇಕು ಅಂತಾ ತುಂಬಾ ದಿನಗಳಿಂದ ಆಸೆ ಇತ್ತು. ಈ ಆಸೆ ಇತ್ತು ನೆರವೇರಿತು. ಚಾಕಲೇಟ್ ಕೊಟ್ರು. ಭಯಪಡಬೇಡ ನಾವಿದ್ದೀವಿ ಎಂದು ಪುನಿಥ್ ರಾಜ್ ಕುಮಾರ್ ಹೇಳಿರೋದಾಗಿ ಬಾಲಕಿ ತಿಳಿಸಿದ್ದಾಳೆ.

ಇದನ್ನೂ ಓದಿ: ಪವರ್ ಸ್ಟಾರ್ ಪುನೀತ್‍ಗೆ 42ನೇ ಹುಟ್ಟುಹಬ್ಬದ ಸಂಭ್ರಮ

ಪುನೀತ್‍ರನ್ನು ನೋಡ್ಬೇಕು: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಳಸಾಲ ಬಡಾವಣೆಯಲ್ಲಿ ವಾಸವಾಗಿರುವ ಪುಟ್ಟ ಬಾಲಕಿ ಪ್ರೀತಿಗೆ ಎರಡು ಕಿಡ್ನಿ ಫೇಲ್ಯೂರ್ ಆಗಿದ್ದು, ಅಪ್ಪನ ಇಸ್ತ್ರಿ ವೃತ್ತಿಯೇ ಬದುಕಿಗೆ ಆಧಾರ. ಚಿಕಿತ್ಸೆ ಸಿಗದಿದ್ರೆ ಪ್ರೀತಿ ಹೆಚ್ಚು ದಿನ ಬದುಕೋದಿಲ್ಲ ಎಂಬಂತಾಗಿದೆ. ಒಮ್ಮೆ ತನ್ನ ನೆಚ್ಚಿನ ಹೀರೋ ಪುನೀತ್‍ರನ್ನ ನೋಡ್ಬೇಕು, ಅವರೊಂದಿಗೆ ಮಾತಾಡ್ಬೇಕು, ಕೈ ಕುಲುಕಿ ಥ್ಯಾಂಕ್ಸ್ ಹೇಳ್ಬೇಕು ಅನ್ನೋದು ಈ ಬಾಲಕಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಳು.

https://www.youtube.com/watch?v=9jGgNRqUVP4

 

Comments

Leave a Reply

Your email address will not be published. Required fields are marked *