ಬಳ್ಳಾರಿಯಲ್ಲಿ ರಾಜ್‍ಕುಮಾರನ ಬೊಂಬೆ ಗಾಯನ

ಬಳ್ಳಾರಿ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಚಿತ್ರ ಸೂಪರ್ ಹಿಟ್ ಆಗಿದ್ದು ಗೊತ್ತೆ ಇದೆ. ಅದರಲ್ಲೂ ರಾಜಕುಮಾರ ಚಿತ್ರದ ‘ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನಾನೇ ರಾಜಕುಮಾರ’ ಅನ್ನೋ ಹಾಡು ಸಾಕಷ್ಟು ಜನಪ್ರಿಯವಾಗಿದೆ.

ಬಳ್ಳಾರಿಯ ತೋರಣಗಲ್ ನ ಜಿಂದಾಲ್ ವಿದ್ಯಾನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಲತಾ ನಾವಲ್ ರ ಅಲ್ಬಮ್ ಬಿಡುಗಡೆ ಕಾರ್ಯಕ್ರಮ ಉದ್ಘಾಟನೆ ಮಾಡಿದ ಪವರ್ ಸ್ಟಾರ್ ತಾವೇ ನಟಿಸಿದ ರಾಜಕುಮಾರ ಚಿತ್ರದ ಹಾಡನ್ನ ಹಾಡಿ ಎಲ್ಲರನ್ನೂ ರಂಜಿಸಿದ್ರು.

ನಟ ಸಾರ್ವಭೌಮ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಪವರ್ ಸ್ಟಾರ್ ಪುನೀತ್ ಶೂಟಿಂಗ್ ನ ಬಿಡುವಿನ ವೇಳೆಯಲ್ಲೇ ಕವಿಯತ್ರಿ ಹಾಗೂ ಬರಹಗಾರ್ತಿ ಲತಾ ವಿನೋದ ನಾವಲ್ ರ ಆಶನಾಯಿ ಅನ್ನೋ ಅಲ್ಬಮ್ ಬಿಡುಗಡೆ ಮಾಡಿದ್ದಾರೆ.

ಪುನೀತ್ ರಾಜ್‍ಕುಮಾರ ಹಾಡು ಹಾಡುತ್ತಿದ್ದಂತೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದ್ದಾರೆ. ಜೊತೆಗೆ ಪುನೀತ್ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ತಾ ಮುಂದು ನಾ ಮುಂದು ಅಂತಾ ಮುಗಿಬಿದ್ದಿದ್ದರು. ಪುನೀತ್ ತಾಳ್ಮೆಯಿಂದ ಎಲ್ಲರ ಜೊತೆ ಸೆಲ್ಫಿ ಗೆ ಪೋಸ್ ನೀಡಿದ್ದಾರೆ.

Comments

Leave a Reply

Your email address will not be published. Required fields are marked *