ಪುನೀತ್ ನೀಡಿರುವ ಉತ್ಸಾಹ, ಸ್ಫೂರ್ತಿಯೊಂದಿಗೆ ಪ್ರಯಾಣ ಪುನಾರಂಭಿಸುತ್ತೇವೆ: ಪಿಆರ್​ಕೆ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಇಡೀ ಚಿತ್ರರಂಗ, ಅಭಿಮಾನಿಗಳು ಹಾಗೂ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಇದೀಗ ಈ ದುಃಖದಲ್ಲಿಯೇ ಪುನೀತ್ ನೀಡಿರುವ ಉತ್ಸಾಹ, ಸ್ಫೂರ್ತಿಯೊಂದಿಗೆ ಪ್ರಯಾಣ ಪುನಾರಂಭಿಸುವುದಾಗಿ ಪಿಆರ್ ಕೆ ಪ್ರೊಡಕ್ಷನ್ ಹೇಳಿದೆ.

ಈ ಸಂಬಂಧ ಪತ್ರವನ್ನು ಟ್ವೀಟ್ ಮಾಡಿರುವ ಪಿಆರ್ ಕೆ, ನಮಗೆ ಹಿಂದಿನದನ್ನು ಬದಲಿಸುವುದು ಅಸಾಧ್ಯವಾಗಿದೆ. ಆದರೆ ಪುನೀತ್ ರಾಜ್ ಕುಮಾರ್ ರವರು ನಮಗೆ ನೀಡಿರುವ ಉತ್ಸಾಹ ಮತ್ತು ಸ್ಫೂರ್ತಿಯೊಂದಿಗೆ ಪಿ.ಆರ್.ಕೆ ಪ್ರೊಡಕ್ಷನ್ ಆಡಿಯೋದ ಮೂಲಕ ಉಜ್ವಲ ಭವಿಷ್ಯವನ್ನು ರಚಿಸಲು ಎದುರು ನೋಡುತ್ತೇವೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

ನಮ್ಮ ಈ ಪ್ರಯಾಣವನ್ನು ಪುನರಾರಂಭಿಸುತ್ತಾ ಅವರ ಕನಸುಗಳನ್ನು ನನಸಾಗಿಸುವಲ್ಲಿ ನಿಮ್ಮ ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳ ಜವಾಬ್ದಾರಿ ಹೊರಲು ಸಿದ್ಧರಾದ ವಿಶಾಲ್ – ಅಪ್ಪು ಪತ್ನಿ ಅಶ್ವಿನಿ ಬಳಿ ಕೋರಿಕೆ

ಪುನೀತ್ ರಾಜ್ ಕುಮಾರ್ ಅವರು ತಮ್ಮ ಕನಸಿನ ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದರು. ಹೊಸ ಮುಖಗಳಿಗೆ ಅವಕಾಶ ನೀಡುವ ಉದ್ದೇಶದಿಂದಲೇ 2017ರ ಜುಲೈ 20ರಂದು ಸ್ಥಾಪನೆ ಆಯಿತು. ಈ ಬ್ಯಾನರ್ ಅಡಿಯಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವರು ಅವಕಾಶ ನೀಡಿದ್ದರು. ಸಾಕಷ್ಟು ಸಿನಿಮಾಗಳನ್ನು ಪಿಆರ್ ಕೆ ಬ್ಯಾನರ್ ನಿರ್ಮಾಣ ಮಾಡಿದೆ. ಆದರೆ ಇದುವರೆಗೆ ಪುನೀತ್ ರಾಜ್ ಕುಮಾರ್ ಅವರು ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದನ್ನೂ ಓದಿ: ತಾನು ನೆಟ್ಟ ಗಿಡಕ್ಕೆ ಪುನೀತ್ ರಾಜ್ ಕುಮಾರ್ ಅಂತ ಹೆಸರಿಟ್ಟ ವಿಶಾಲ್

Comments

Leave a Reply

Your email address will not be published. Required fields are marked *