ನಟ ಪುನೀತ್, ಯಶ್ ಮನೆಯಲ್ಲಿ ಎಷ್ಟು ಆಸ್ತಿ ಪತ್ತೆಯಾಗಿದೆ?

ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಸ್ಟಾರ್ ಗಳ ಮನೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಪುನೀತ್ ರಾಜ್ ಕುಮಾರ್ ಮನೆಯ ತಪಾಸಣೆ ಮುಗಿದಿದೆ.

ಪ್ರತಿ ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದು, ಸಂಪಾದಿಸಿದ್ದ, ಸಂಪಾದನೆ ಮಾಡುತ್ತಿರುವ ಲೆಕ್ಕವನ್ನೆಲ್ಲಾ ಕ್ರೋಢೀಕರಿಸುತ್ತಿದ್ದಾರೆ. ಸ್ಟಾರ್ ನಟರು ಕೇವಲ ಆಕ್ಟಿಂಗ್‍ನಲ್ಲಿ ಮಾತ್ರ ತೊಡಗಿಸಿಕೊಂಡಿಲ್ಲ. ಆಕ್ಟರ್ ಕಮ್ ಬಿಸಿನೆಸ್‍ಮೆನ್‍ಗಳಾಗಿದ್ದೇ ಇವತ್ತಿನ ಐಟಿ ರೇಡ್‍ಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

ನಟ ಪುನೀತ್ ಮತ್ತು ಯಶ್ ಮನೆಯಲ್ಲಿ ದೊರೆತ ಆಸ್ತಿಯ ಲೆಕ್ಕಗಳನ್ನು ನೋಡುವುದಾದರೆ, ಬೆಂಗಳೂರಿನಲ್ಲಿ ಪುನೀತ್ ಹೆಸರಲ್ಲಿ 10 ಆಸ್ತಿ ಪತ್ತೆಯಾಗಿದೆ. ಗಾಂಧಿನಗರದ 6ನೇ ಕ್ರಾಸ್, ಹೆಣ್ಣೂರು, ಥಣಿಸಂದ್ರ, ಕೆಂಪಾಪುರ, ಚಿರಂಜೀವಿ ಲೇಔಟ್, ರಾಜಾಜಿನಗರದ 1ನೇ ಬ್ಲಾಕ್‍ನಲ್ಲಿ ಆಸ್ತಿ ಹೊಂದಿದ್ದು, ಕೆಂಪಾಪುರ, ಚಿರಂಜೀವಿ ಲೇಔಟ್‍ನಲ್ಲಿ 3, ಕೋರಮಂಗಲದಲ್ಲಿ ಕಮರ್ಷಿಯಲ್ ಪ್ರಾಪರ್ಟಿ ಮಾಡಿದ್ದಾರೆ. ಇನ್ನೂ ಪಿಆರ್ ಕೆ ಪ್ರೊಡಕ್ಷನ್, ಪಿಆರ್ ಕೆ ಆಡಿಯೋ ವ್ಯವಹಾರ ಬಗ್ಗೆ ಮಾಹಿತಿ ಸಂಗ್ರಹವಾಗಿದೆ. ಇಡೀ ವ್ಯವಹಾರದ ಬಗ್ಗೆ ಮಾಹಿತಿ ನೀಡಲು ನಟ ಪುನೀತ್ ಐಟಿ ಅಧಿಕಾರಿಗಳ ಬಳಿ ಕಾಲಾವಕಾಶ ಕೋರಿದ್ದಾರೆ. ಇದನ್ನೂ ಓದಿ: 20ಕೆಜಿ ಬೆಳ್ಳಿ, 450ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಂ ಸರ- ಯಶ್ ಮನೆಯಲ್ಲಿ ಪತ್ತೆ..?

ಇತ್ತ ಯಶ್ ಮನೆಯಲ್ಲಿ 20 ಕೆಜಿಗೂ ಅಧಿಕ ಬೆಳ್ಳಿ, ಸುಮಾರು 450 ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಮ್ ಸರ ಪತ್ತೆಯಾಗಿವೆ. ಅಷ್ಟೇ ಅಲ್ಲದೇ 2 ಬ್ಯಾಂಕ್‍ಗಳಲ್ಲಿ 40 ಕೋಟಿ ಸಾಲ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. 8 ಬ್ಯಾಂಕ್ ಖಾತೆ ಹೊಂದಿರುವ ಯಶ್, ತಾಯಿ ಜೊತೆ 4 ಜಂಟಿ ಖಾತೆಯನ್ನು ಹೊಂದಿದ್ದಾರೆ. ಮಂಡ್ಯದಲ್ಲಿ 8 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಅಧಿಕಾರಿಗಳ ಪ್ರತಿ ಪ್ರಶ್ನೆಗೂ ಸಹನೆಯಿಂದ ಯಶ್ ತಾಯಿ ಉತ್ತರಿಸಿದ್ದಾರೆ ಐಟಿ ಮೂಲಗಳಿಂದ ತಿಳಿದು ಬಂದಿದೆ.

ಸದ್ಯಕ್ಕೆ ಇಬ್ಬರ ನಟರ ಆಸ್ತಿ ಮಾಹಿತಿ ಲಭ್ಯವಾಗಿದ್ದು, ಇನ್ನಿಬ್ಬರ ಮಾಹಿತಿಯನ್ನು ಐಟಿ ಅಧಿಕಾರಿಗಳು ಕಲೆಹಾಕಲಾಗುತ್ತಿದೆ. ನಟ ಪುನೀತ್ ರಾಜ್‍ಕುಮಾರ್ ಮನೆಯ ಮೇಲಿನ ಐಟಿ ರೇಡ್ ಮುಗಿದಿದ್ದು, ನಟ ಯಶ್, ಸುದೀಪ್ ಮತ್ತು ಶಿವರಾಜ್‍ಕುಮಾರ್ ಮನೆಯಲ್ಲಿ ಮೂರನೇ ದಿನವೂ ಐಟಿ ದಾಳಿ ಮುಂದುವರಿದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *