ದೊಡ್ಮನೆ ರಾಜಕುಮಾರನಿಗೆ ಹುಟ್ಟು ಹಬ್ಬದ ಸಂಭ್ರಮ- ನಟಸಾರ್ವಭೌಮ ತಂಡದಿಂದ ಫಸ್ಟ್ ಟೀಸರ್ ಗಿಫ್ಟ್

ಬೆಂಗಳೂರು: ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಗೆ 43ನೇ ವರ್ಷದ ಹುಟ್ಟುಹಬ್ಬ. ಹೀಗಾಗಿ ರಾತ್ರಿಯಿಂದಲೇ ಪುನೀತ್ ಅಭಿಮಾನಿಗಳು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದ ಮುಂದೆ ನೂರಾರು ಅಭಿಮಾನಿ ಜಮಾಯಿಸಿದ್ದರು.

ಅಪ್ಪು ತಾಯಿ ಪಾರ್ವತಮ್ಮ ರಾಜ್‍ಕುಮಾರ್ ನಿಧನದಿಂದ ಹುಟ್ಟುಹಬ್ಬವನ್ನ ಆಚರಿಸದಿರಲು ನಿರ್ಧರಿಸಿದ್ದರು. ಆದರೆ ಈಗ ಅಭಿಮಾನಿಗಳ ಒತ್ತಾಯದ ಮೇರೆಗೆ ಅವರು ತಂದಿದ್ದ ಕೇಕ್ ಕತ್ತರಿಸಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

1968 ರಲ್ಲಿ ವರನಟ ಡಾ. ರಾಜ್‍ಕುಮಾರ್ ನಟಸಾರ್ವಭೌಮ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಕೂಡ ಮಾಡಿದ್ದರು. ಥೇಟರ್‍ನಲ್ಲಿ ಸಿನಿಮಾ ನೋಡಿದ ಜನ ಮೆಚ್ಚಿಕೊಂಡಿದ್ದರು. ಶುಕ್ರವಾರದಿಂದಲೇ ಪುನೀತ್ ಹುಟ್ಟುಹಬ್ಬದ ಸಂಭ್ರಮ ಶುರುವಾಗಿದ್ದು, ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ `ನಟಸಾರ್ವಭೌಮ’ ಸಿನಿಮಾದಲ್ಲಿ ಅಭಿನಯಿಸುತ್ತಿರುವ ನಟ ಪುನೀತ್ ಚಿತ್ರತಂಡ ಸೆಟ್‍ನಲ್ಲೇ ಸರ್ಪ್ರೈಸ್ ನೀಡಿದ್ದಾರೆ. ಕೇಕ್ ತರಿಸಿ ಕಟ್ ಮಾಡಿಸಿದ ಚಿತ್ರತಂಡ ಪುನೀತ್‍ಗೆ ಜನ್ಮದಿನದ ಶುಭಾಶಯ ಕೋರಿದ್ದರು. ಅಷ್ಟೇ ಅಲ್ಲದೇ ಅಪ್ಪು ಹುಟ್ಟುಹಬ್ಬ ಪ್ರಯುಕ್ತ ಚಿತ್ರತಂಡ ರಾತ್ರಿ 12 ಗಂಟೆಗೆ ನಟಸಾರ್ವಭೌಮ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಮಾಡಿದ್ದಾರೆ.

ಹೊಸ ಹೇರ್ ಸ್ಟೈಲ್ ಜೊತೆ ಯೋಗಿ ಜಿ ರಾಜ್ ಡಿಸೈನ್ ಮಾಡಿರೋ ಕಾಸ್ಟ್ಯೂಮ್ ಹಾಕಿಕೊಂಡು ವೈದಿ ಕ್ಯಾಮೆರಾ ಮುಂದೆ ಪುನೀತ್ ಪೋಸ್ ಕೊಟ್ಟಿದ್ದಾರೆ. ರಣವಿಕ್ರಮ ಸಿನಿಮಾದ ನಂತರ ಮತ್ತೆ ಒಂದಾಗಿದ್ದಾರೆ ಪುನೀತ್ ರಾಜ್‍ಕುಮಾರ್ ಮತ್ತು ಪವನ್ ಒಡೆಯರ್. ಪವರ್ ಸ್ಟಾರ್ ಗೆ ಗುಳಿಕೆನ್ನೆ ಹುಡುಗಿ ರಚಿತಾ ಸಾಥ್ ಕೊಡುತ್ತಿದ್ದು, ಚಕ್ರವ್ಯೂಹದ ನಂತರ ಮತ್ತೊಮ್ಮೆ ಮ್ಯಾಜಿಕ್ ಮಾಡಲು ಸಜ್ಜಾಗಿದೆ ಈ ಜೋಡಿ. ಚಿತ್ರದಲ್ಲಿ ಹಿರಿಯ ನಟಿ ಬಿ. ಸರೋಜಾದೇವಿ ಕೂಡ ಬಣ್ಣ ಹಚ್ಚಲಿದ್ದು, ಇವರ ಜೊತೆ ಚಿಕ್ಕಣ್ಣ, ರವಿಶಂಕರ್, ಅಚ್ಚುತ್ ಕುಮಾರ್ ಸೇರಿದಂತೆ ಹಲವರು ನಟಿಸಲಿದ್ದಾರೆ.

Comments

Leave a Reply

Your email address will not be published. Required fields are marked *