ಸೆಟ್ ನಲ್ಲಿ ನಾಯಕಿಯ ಬದಲು ಇನ್ಯಾರಿಗೋ ಕಿಸ್ ಮಾಡಿದ್ರು ನಟ ಪ್ರೇಮ್

ಬೆಂಗಳೂರು: ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ರಾಜ್ ನಿರ್ದೇಶಿಸಿರುವ ದಳಪತಿ ಸಿನಿಮಾ ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ದಳಪತಿಯ ಚಿತ್ರತಂಡ ಖಾಸಗಿ ರೇಡಿಯೋ ಕಾರ್ಯಕ್ರಮಕ್ಕೆ ಬಂದಿತ್ತು. ಈ ಕಾರ್ಯಕ್ರಯದಲ್ಲಿ ನಟ ಪ್ರೇಮ್ ಸೇರಿದಂತೆ ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ನಟಿ ಕೃತಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿ ಸಿನಿಮಾಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು.

ನಿರೂಪಕಿ ಪ್ರೇಮ್ ಗೆ ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯ ಬರುತ್ತದೆ ಎಂದು ಒಂದು ಪ್ರಶ್ನೆ ಕೇಳಿದ್ದಾರೆ. ಆಗ ನಟಿ ಕೃತಿ ಅವರು ಸಿನಿಮಾ ಶೂಟಿಂಗ್ ವೇಳೆ ನಡೆದ ಕಿಸ್ಸಿಂಗ್ ಘಟನೆಯ ಬಗ್ಗೆ ಹೇಳಿದ್ದಾರೆ.

ಸಿನಿಮಾದಲ್ಲಿ ನಟ ಮತ್ತು ನಟಿಯ ಮಧ್ಯೆ ಒಂದು ಕಿಸ್ಸಿಂಗ್ ಸೀನ್ ನ ಶೂಟಿಂಗ್ ನಡೆಯುತ್ತಿತ್ತು. ಆಗ ನಾನು ಬೈಸಿಕಲ್ ಮೇಲೆ ಬರುತ್ತಿದ್ದೆ. ನನಗೆ ನಟ ಪ್ರೇಮ್ ಬಂದು ಕಿಸ್ ಮಾಡಬೇಕಿತ್ತು. ಆದರೆ ನನ್ನನ್ನ ನಿರ್ಲಕ್ಷಿಸಿ ನಿರ್ದೇಶಕ ಪ್ರಶಾಂತ್ ಸರ್ ಗೆ ಕಿಸ್ ಮಾಡಿದ್ರೂ ಎಂದು ಹೇಳಿದ್ದಾರೆ.

ದಳಪತಿ ಸಿನಿಮಾದ ಮೊದಲ ಭಾಗವನ್ನು ಹೀರೋ ಮತ್ತು ಹೀರೋಯಿನ್ ಮಧ್ಯೆಯ ಲವ್ವಿಗೇ ಮೀಸಲಿಡಲಾಗಿದೆ. ಕ್ಯೂಟ್ ಎನಿಸೋ ಹೀರೋಯಿನ್ ಮೇಲೆ ಹುಡುಗನಿಗೆ ಭಲೇ ಪ್ರೀತಿ. ಪ್ರೀತಿಸುವ ಬಹುತೇಕರು ಮಾಡುವಂತೆ ಇಲ್ಲೂ ಕೂಡಾ ಹೀರೋ ಒಂದಿಷ್ಟು ಸುಳ್ಳು ಹೇಳಿ ಹುಡುಗಿಯನ್ನು ಪಟಾಯಿಸಿಕೊಂಡಿರುತ್ತಾನೆ. ದಿನ ಕಳೆದಂತೆ ಹುಡುಗಿಗೆ ಈತನ ಅಸಲಿಯತ್ತು ಗೊತ್ತಾಗಿಬಿಡುತ್ತದೆ. ಸುಳ್ಳು ಹೇಳಿದರೇನು ಹುಡುಗನಿಗೆ ಒಳ್ಳೇತನವಿದ್ದರೆ ಸಾಕು ಅಂತಾ ಮತ್ತೆ ಆಕೆ ಕೋಪವನ್ನು ತಣ್ಣಗಾಗಿಸಿಕೊಳ್ಳುವ ಹೊತ್ತಿಗೆ ಯಾರೂ ಊಹಿಸಲಾರದ ಟ್ವಿಸ್ಟ್ ನಡೆಯುತ್ತದೆ.

ಪ್ರಶಾಂತ್ ರಾಜ್ ಅವರ ನಿರ್ದೇಶನಕ್ಕೆ ಚರಣ್ ರಾಜ್ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮೆರಾ ಸಾಥ್ ನೀಡಿವೆ.

Comments

Leave a Reply

Your email address will not be published. Required fields are marked *