ಎಲೆಕ್ಷನ್‍ಗೆ ನಿಂತು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ `ಎಂಎಲ್‍ಎ’ ಪ್ರಥಮ್

ಬೆಂಗಳೂರು: ಸೆಟ್ಟೇರಿದಾಗಿನಿಂದಲೂ ಸಿನಿ ಅಂಗಳದಲ್ಲಿ ತನ್ನದೇ ಚಾಪನ್ನು ಹುಟ್ಟುಹಾಕಿದ್ದ ಪ್ರಥಮ್ ಅಭಿನಯದ ಎಂಎಲ್‍ಎ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಪುನೀತ್ ರಾಜ್ ಕುಮಾರ್ ಒಡೆತನದ ಆಡಿಯೋ ಪಿಆರ್‌ಕೆ ಸಂಸ್ಥೆ ಮೂಲಕ ಎಂಎಲ್‍ಎ ಚಿತ್ರ ಟ್ರೇಲರ್ ಬಿಡುಗಡೆಯಾಗಿದ್ದು, ಈಗಾಗಲೇ 39 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ `ಎಂಎಲ್‍ಎ’ ಚಿತ್ರದ ಹಾಡುಗಳು ಹಿಟ್ ಆಗಿದ್ದು, ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ಪ್ರಥಮ್ ಅವರ ತುಂಟಾಟ, ಚೇಷ್ಠೆಗಳು ಗಮನ ಸೆಳೆದಿದೆ.

ಟ್ರೇಲರ್ ನಲ್ಲಿ ತಮ್ಮ ವಿಭಿನ್ನ ಅಭಿನಯದ ಮೂಲಕ ಪ್ರಥಮ್ ಗಮನ ಸೆಳೆದಿದ್ದು, ಚಿತ್ರ ಸಂಪೂರ್ಣ ಭರಪೂರ ಮನರಂಜನೆ ನೀಡುವ ವಿಶ್ವಾಸ ಮೂಡಿಸಿದೆ. ಈ ಹಿಂದೆ ಚಿತ್ರದ ಹಾಡುಗಳ ಬಿಡುಗಡೆ ಮಾಡಿ ಅಭಿಮಾನಿಗಳ ಮನಗೆದ್ದಿದ್ದ ಚಿತ್ರತಂಡವನ್ನು ನಟ ದರ್ಶನ್, ಯಶ್ ಸೇರಿದಂತೆ ಅನೇಕರು ಹಾಡುಗಳನ್ನು ಮೆಚ್ಚಿಕೊಂಡಿದ್ದರು. ಬಳಿಕ ಮತ್ತೊಂದು ವಿಶೇಷ ಹಾಡನ್ನು ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಅವರ ಮೂಲಕ ಬಿಡುಗಡೆ ಮಾಡಿಸಿ ಪ್ರಥಮ್ ಸುದ್ದಿಯಾಗಿದ್ದರು.

ಚಿತ್ರಕ್ಕೆ ವೆಂಕಟೇಶ್ ರೆಡ್ಡಿ ಬಂಡವಾಳ ಹಾಕಿದ್ದು, ಆರ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾಗೆ ಕೃಷ್ಣ ಸಾರಥಿ ಛಾಯಾಗ್ರಹಣವನ್ನ ಹೊಂದಿದ್ದು, ವಿಕ್ರಮ್ ಸುಬ್ರಹ್ಮಣ್ಯ ಸಂಗೀತ ನೀಡಿದ್ದಾರೆ. ಇನ್ನು ಚಿತ್ರದ ನಾಯಕಿಯಾಗಿ ಸೋನಾಲ್ ಮಾಂಟೇರಿಯೋ ಕಾಣಿಸಿಕೊಂಡಿದ್ದು, ಉಳಿದಂತೆ ಮಾಳವಿಕಾ ಅವಿನಾಶ್, ಚಂದ್ರಕಲಾ ಮತ್ತಿತರರು ಅಭಿನಯಿಸಿದ್ದಾರೆ.

Comments

Leave a Reply

Your email address will not be published. Required fields are marked *