ಮೈಸೂರು: ಇನ್ಮುಂದೆ ಯಾರನ್ನಾದರೂ ಹೊಗಳುವ ಮುನ್ನ ಎಚ್ಚರ ವಹಿಸುತ್ತೇನೆ. ಅವರ ಪೂರ್ವ ಪರ ತಿಳಿದು ಮಾತನಾಡುತ್ತೇನೆ. ನನ್ನನ್ನ ಪ್ರೀತಿಸುತ್ತಿರುವ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಗ್ರಾಮ ತೆಗೆದುಕೊಳ್ಳಲು ಹ್ಯಾರಿಸ್ ಪುತ್ರ ನಲಪಾಡ್ ಹಣ ನೀಡಿದ್ದರು. ಆ ಕ್ಷಣದಲ್ಲಿ ಈ ರೀತಿಯ ಯುವಕರು ಇರಬೇಕು ಎಂದಿದ್ದೆ. ಅಲ್ಲದೇ ಈ ರೀತಿಯ ಗುಣ ಬೆಳೆಸಿಕೊಳ್ಳಬೇಕು ಎಂದಿದ್ದೆ. ಆದ್ರೆ ಆತನ ಮನದಲ್ಲಿ ರಾಕ್ಷಸ ಇದ್ದಾನೆಂದು ಗೊತ್ತಿರಲಿಲ್ಲ ಅಂತ ಹೇಳಿದ್ರು. ಇದನ್ನೂ ಓದಿ: ಅಭಿಮಾನಿಗಳ ಜೊತೆ ಕ್ಷಮೆ ಕೇಳಿದ ಸೆಹ್ವಾಗ್

ಹಿರಿಯ ಗೌರಿಯ ಸಾವು ನನ್ನನ್ನು ತುಂಬಾ ಡಿಸ್ಟರ್ಬ್ ಮಾಡಿತು. ಹೀಗಾಗಿ, ಕಂಫರ್ಟ್ ಲೈಫ್ ಬಿಟ್ಟು ಹೋರಾಟದ ದಾರಿಗೆ ಇಳಿದು ಪ್ರಶ್ನೆ ಕೇಳುತ್ತಿದ್ದೇನೆ. ನಾನು ಪ್ರಜೆಯಾಗಿ ಮಾತಾಡುತ್ತಿದ್ದೇನೆ. ನಾನೂ ಎಡಪಂಥೀಯನಾಗಿ ಧ್ವನಿ ಎತ್ತಿದ್ದು ನಿಜ. ಯಾವುದು ತಪ್ಪು ಎನಿಸುತ್ತಿದೆಯೋ ಅದರ ವಿರುದ್ಧ ಹೋರಾಟಕ್ಕೆ ಇಳಿದಿದ್ದೇನೆ. ನಾನೂ ಧೋರಣೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ. ನಾನೂ ರೈಟೂ ಅಲ್ಲ ಲೆಫ್ಟೂ ಅಲ್ಲ. ನಾನೂ ಮೂರನೇ ಸಿದ್ದಾಂತಕ್ಕೆ ಸೇರಿದವನು ಅಂತ ಅಂದ್ರು.

ಅಂದು ರೈ ಏನ್ ಹೇಳಿದ್ರು?: ಜನವರಿಯಲ್ಲಿ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಕಾಶ್ ರೈ ಅವರು, ಮಹಮ್ಮದ್ ನಲಪಾಡ್ ನನ್ನು ವೇದಿಕೆಯ ಮೇಲೆ ಕರೆದು, ಈತ ನಲಪಾಡ್ ಅಂತ. ಎಂಎಲ್ ಎ ಹ್ಯಾರಿಸ್ ಮಗ. ಹ್ಯಾರಿಸ್ ಮಕ್ಕಳನ್ನು ಬೆಳೆಸಿದ ಹಾಗೆ ಎಲ್ಲರೂ ತಮ್ಮ ಮಕ್ಕಳನ್ನು ಬೆಳೆಸಬೇಕು ಅಂತ ವೇದಿಕೆಯ ಮೇಲೆಯೇ ಹೇಳುವ ಮೂಲಕ ಮಹಮ್ಮದ್ ನಲಪಾಡ್ ನ ಬೆನ್ನು ತಟ್ಟಿದ್ದರು.

ಈತ ಸಣ್ಣ ಹುಡುಗ. ಒಂದು ಕಾರ್ಯಕ್ರಮವಿದೆ. ನೀವು ಬರಬೇಕು ಅಂತ ಹೇಳಿದ. ನೀವು ಬಹಳ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೀರಿ. ಹೀಗಾಗಿ ಆ ಕಾರ್ಯಕ್ರಮಕ್ಕೆ ನಾನು ಬರ್ತಿನಿ ಅಂತ ಹೇಳಿದೆ. ನನ್ನದೊಂದು ಪ್ರಕಾಶ್ ರಾಜ್ ಫೌಂಡೇಶನ್ ಅನ್ನೊದೊಂದಿದೆ. ಅದರಲ್ಲಿ ಒಂದಷ್ಟು ಹಳ್ಳಿಗಳನ್ನು ದತ್ತು ತೆಗೆದುಕೊಂಡು ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಅಂದೆ. ಆ ಸಂದರ್ಭದಲ್ಲಿ ಈ ಹುಡುಗ ನನಗೆ ಸಹಾಯ ಮಾಡಿದ್ದ. ತನ್ನ ಕ್ಷೇತ್ರವಲ್ಲದೇ, ನಾನು ದತ್ತು ತೆಗೆದುಕೊಳ್ಳುವ ಚಿತ್ರದುರ್ಗದ ಒಂದು ಹಳ್ಳಿಯಲ್ಲಿ ಒಂದು ಪುಟ್ಟ ಮನೆ ಬಡವನಿಗಾಗಿ ಕಟ್ಟಿ, ಅಲ್ಲಿ ಒಬ್ಬ ರೈತನಿಗೆ ಸಹಾಯ ಮಾಡಿದಿದ್ದಿದ್ರೆ, ಅದು ಈ ಹುಡುಗ ಅಂತ ಹೇಳಿ ನೆರೆದ ಜನರ ಮುಂದೆ ಬೆನ್ನು ತಟ್ಟಿದ್ರು.
https://www.youtube.com/watch?v=G06kEeDdJ2U&feature=youtu.be
https://www.youtube.com/watch?v=fElPQI1QKLg

Leave a Reply