ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ‘ದಿ ರಾಜಾ ಸಾಬ್’ ಚಿತ್ರದ ಬಗ್ಗೆ ಸಿಕ್ತು ಅಪ್‌ಡೇಟ್

ಡಾರ್ಲಿಂಗ್ ಪ್ರಭಾಸ್ (Prabhas) ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ‘ಕಲ್ಕಿ’ (Kalki 2898 AD) ಸಿನಿಮಾದ ಯಶಸ್ಸಿನ ನಂತರ ಪ್ರಭಾಸ್ ಮುಂದಿನ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ (The Raja Saab) ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿವೀಲ್ ಆಗಲಿದೆ.

ಇದೇ ಜು.29ರಂದು ಸಂಜೆ 5 ಗಂಟೆಗೆ ‘ದಿ ರಾಜಾ ಸಾಬ್’ ಸಿನಿಮಾದ ಮೊದಲು ತುಣುಕು ಹೊರಬೀಳಲಿದೆ. ಪ್ರಭಾಸ್ ಲುಕ್ ಅನಾವರಣ ಆಗಲಿದೆ. ಚಿತ್ರದ ಗ್ಲಿಂಪ್ಸ್ ಕುರಿತು ಚಿತ್ರತಂಡ ಮಾಹಿತಿ ನೀಡಿದೆ. ಪ್ರಭಾಸ್ ಬ್ಯಾಕ್‌ ಸೈಡ್ ನಿಂತಿರುವ ಪೋಸ್ಟರ್ ರಿವೀಲ್ ಮಾಡಿ ಈ ಸಿಹಿಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಈ ಚಿತ್ರದಲ್ಲಿ ಪ್ರಭಾಸ್‌ಗೆ ನಿಧಿ ಅಗರ್‌ವಾಲ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಮಾರುತಿ ಎಂಬುವವರು ನಿರ್ದೇಶನ ಮಾಡಿದ್ದಾರೆ. ಎಂದಿಗಿಂತ ಪ್ರಭಾಸ್ ಈ ಬಾರಿ ಸ್ಟೈಲೀಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಕುರಿತು ಫ್ಯಾನ್ಸ್‌ಗೆ ಭಾರೀ ನಿರೀಕ್ಷೆ ಇದೆ.