ಗೆಲ್ಲಲು ತಂತ್ರ ಬದಲಿಸಿದ ಪ್ರಭಾಸ್- ಸಂಖ್ಯಾಶಾಸ್ತ್ರ ಮೊರೆ ಹೋದ ನಟ

ಡಾರ್ಲಿಂಗ್ ಪ್ರಭಾಸ್ (Prabhas) ತಮ್ಮ ಹೆಸರಿಗೆ ಹೊಸ ಅಕ್ಷರ ಸೇರಿಸಿಕೊಂಡ್ರ? ಸಿನಿಜರ್ನಿ ಮತ್ತಷ್ಟು ಸೂಪರ್ ಆಗ್ಲಿ ಅಂತ ಸಂಖ್ಯಾಶಾಸ್ತ್ರ ಫಾಲೋ ಮಾಡ್ತಿದ್ದಾರ? ಪ್ರಭಾಸ್ ಹೆಸರಿನಲ್ಲಿ ಆಗಿರುವ ಬದಲಾವಣೆ ಏನು? ಈ ಬದಲಾವಣೆ ವರ್ಕೌಟ್ ಆಗುತ್ತಾ? ಇಲ್ಲಿದೆ ಮಾಹಿತಿ.

‘ಸಲಾರ್’ (Salaar) ಸಂಭ್ರಮದಲ್ಲಿರುವ ಡಾರ್ಲಿಂಗ್ ಪ್ರಭಾಸ್ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಸಂಭಾವನೆ ಕೂಡ ಜಾಸ್ತಿ ಮಾಡಿಕೊಂಡಿದ್ದಾರೆ ಅನ್ನೋ ಟಾಕ್ ಕೂಡ ಶುರುವಾಗಿದೆ. ಸಂಪಾದನೆ ಬಗ್ಗೆ ಆಮೇಲೆ ಮಾತಾಡೋಣ ಸದ್ಯಕ್ಕೆ ಸೌಂಡ್ ಮಾಡ್ತಿರೋ ವಿಚಾರ ‘ರಾಜಾ ಸಾಬ್’ (Raja Saab) ಸಿನಿಮಾದ ಟೈಟಲ್ ಪೋಸ್ಟರ್‌ನಲ್ಲಿ ಪ್ರಭಾಸ್ ಹೆಸರು ಜೊತೆಗೆ ಮತ್ತೊಂದು ಎಸ್ ಎನ್ನುವ ಅಕ್ಷರ ಸೇರಿಕೊಂಡಿದೆ. ಈ ಎಸ್ ಅಕ್ಷರ ಬಹಳಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಡಾರ್ಲಿಂಗ್ ಸಂಖ್ಯಾಶಾಸ್ತ್ರ ಫಾಲೋ ಮಾಡ್ತಿದ್ದಾರೆ ಎನ್ನುವ ಡೌಟ್ ಶುರುವಾಗಿದೆ. ಇದನ್ನೂ ಓದಿ:ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ನಟಿ ಕಾವ್ಯಾ ಗೌಡ

 

View this post on Instagram

 

A post shared by Prabhas (@actorprabhas)

ಮಾರುತಿ ನಿರ್ದೇಶನದ ‘ರಾಜಾಸಾಬ್’ ಫಸ್ಟ್ ಲುಕ್ ಪೋಸ್ಟರ್ ಜೊತೆಗೆ ಟೀಸರ್ ಕೂಡ ರಿಲೀಸ್ ಆಗಿದೆ. ಹಬ್ಬದ ಸಂಭ್ರಮದಲ್ಲಿ ಫ್ಯಾನ್ಸ್‌ಗೆ ಮುಂದಿನ ಸಿನಿಮಾ ಬಗ್ಗೆ ಪ್ರಭಾಸ್ ಅಪ್‌ಡೇಟ್ ಕೊಟ್ಟಿದ್ದಾರೆ.

ಇದು ನಿಜವಾಗಲೂ ಪ್ರಭಾಸ್ ತಮ್ಮ ಹೆಸರಿನಲ್ಲಿ ಮಾಡಿಕೊಂಡಿರುವ ಬದಲಾವಣೆಯಾ? ಅಥವಾ ಡಿಸೈನರ್ ಮಾಡಿರುವ ಎಡವಟ್ಟಾ ಕ್ಲ್ಯಾರಿಟಿ ಸದ್ಯಕಿಲ್ಲ. ಮುಂದೆ ಈ ಎಸ್ ಬಿಟ್ಟು ಹೋಗುತ್ತಾ? ಅಥವಾ ಹಾಗೇ ಮುಂದುವರಿಯುತ್ತಾ ಗೊತ್ತಿಲ್ಲ. ಡಾರ್ಲಿಂಗ್ ಫ್ಯಾನ್ಸ್ ಮಾತ್ರ ನಮ್ಮ ಬಾಸ್‌ಗೆ ಲಕ್ ಬದಲಾಯ್ತು ಅಂತ ಖುಷಿಯಲ್ಲಿದ್ದಾರೆ.