‘ರಾಜಾ ಸಾಬ್’ ಚಿತ್ರದಲ್ಲಿನ ಪ್ರಭಾಸ್ ಲುಕ್ ಲೀಕ್

‘ಸಲಾರ್’ (Salaar) ಸಿನಿಮಾದ ಸಕ್ಸಸ್ ನಂತರ ಇದೀಗ ‘ರಾಜಾ ಸಾಬ್’ (Raja Saab) ಸಿನಿಮಾದ ಶೂಟಿಂಗ್‌ನಲ್ಲಿ ಪ್ರಭಾಸ್ (Prabhas) ಬ್ಯುಸಿಯಾಗಿದ್ದಾರೆ. ಚಿತ್ರೀಕರಣಕ್ಕೆ ಹಾಜರಿ ಹಾಕಿರುವ ಪ್ರಭಾಸ್ ರಾಜಾ ಸಾಬ್ ಲುಕ್ ಲೀಕ್ ಆಗಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಎಂದೆನಿಸುವ ಕಥೆಗಳಲ್ಲಿ ಪ್ರಭಾಸ್ ನಟಿಸುತ್ತಾರೆ. ‘ಸಲಾರ್’ ಬಳಿಕ ರಾಜಾ ಸಾಬ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಡಿಫರೆಂಟ್ ಲುಕ್‌ನಲ್ಲಿ ಪ್ರಭಾಸ್ ಕಾಣಿಸಿಕೊಳ್ತಿದ್ದಾರೆ. ಉದ್ದನೆಯ ಕೂದಲು ಬಿಟ್ಟು ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ನಟನ ಹೊಸ ಲುಕ್ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:18 ವರ್ಷಗಳ ನಂತರ ಒಂದಾದ ಸೂರ್ಯ, ಜ್ಯೋತಿಕಾ

ಪ್ರಭಾಸ್‌ಗೆ ನಾಯಕಿಯಾಗಿ ಬೆಂಗಳೂರಿನ ಬೆಡಗಿ ನಿಧಿ ಅಗರ್ವಾಲ್ (Nidhi Aggerwal) ನಟಿಸುತ್ತಿದ್ದಾರೆ. ಚಿತ್ರದಲ್ಲಿ ಮಾಳವಿಕಾ, ರಿದ್ಧಿ ಕುಮಾರ್, ಕೆಜಿಎಫ್ 2 ಅಧೀರ ಸಂಜಯ್ ದತ್, ಯೋಗಿ ಬಾಬು ಕೂಡ ಚಿತ್ರದ ಭಾಗವಾಗವಾಗಿದ್ದಾರೆ.

‘ರಾಜಾ ಸಾಬ್’ ಚಿತ್ರವನ್ನು ಮಾರುತಿ ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷದ ಅಂತ್ಯ ಡಿಸೆಂಬರ್‌ನಲ್ಲಿ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.