ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

‘ಗುಳ್ಟು’ (Gultu) ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ‘ಹೊಯ್ಸಳ’ (Hoysala) ಖ್ಯಾತಿಯ ನವೀನ್ ಶಂಕರ್ (Naveen Shankar) ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತಡೇ ಖುಷಿಯಲ್ಲಿ ಫ್ಯಾನ್ಸ್‌ಗೆ ನಟ ನವೀನ್‌ ಟೀಮ್‌ ಕಡೆಯಿಂದ ಸೂಪರ್ ಸರ್ಪ್ರೈಸ್‌ವೊಂದು ಸಿಕ್ಕಿದೆ. ಹೊಯ್ಸಳ ಚಿತ್ರದ ಬಲಿ ಪಾತ್ರದ ಸಕ್ಸಸ್‌ ನಂತರ ಹೊಸ ಅನೌನ್ಸ್‌ಮೆಂಟ್‌ ಮೂಲಕ ಫ್ಯಾನ್ಸ್‌ ಸಿಹಿ ಸುದ್ದಿ ನೀಡಿದ್ದಾರೆ.

ಧರಣಿ ಮಂಡಲ ಮಧ್ಯದೊಳಗೆ, ಹೊಂದಿಸಿ ಬರೆಯಿರಿ, ಹೊಯ್ಸಳ ಸಿನಿಮಾಗಳ ಮೂಲಕ ಈ ವರ್ಷ ನವೀನ್ ಶಂಕರ್ ಪ್ರೇಕ್ಷಕರ ಮನದಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ‘ಹೊಯ್ಸಳ’ ಚಿತ್ರದಲ್ಲಿ ಡಾಲಿಗೆ (Daali) ವಿಲನ್ ಆಗಿ ನವೀನ್ ಟಕ್ಕರ್ ಕೊಟ್ಟಿದ್ದರು. ಬಲಿ ರೋಲ್ ಮೂಲಕ ಮಿಂಚಿದ್ದರು. ನವೀನ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಇಲ್ಲಿದೆ ಡಿಟೈಲ್ಸ್. ಇದನ್ನೂ ಓದಿ:ಮಗಳ ವಯಸ್ಸಿನ ಫಾತಿಮಾ ಜೊತೆ ಮತ್ತೆ ಮದುವೆಗೆ ಸಜ್ಜಾದ ಆಮೀರ್‌ ಖಾನ್

‘ಕ್ಷೇತ್ರಪತಿ’ ಸಿನಿಮಾದಲ್ಲಿ ನವೀನ್ ಶಂಕರ್ ಅವರು ಇಂಜಿನಿಯರ್, ರೈತನ ಮಗ. ಇವರಿಬ್ಬರ ಹೋರಾಟದ ಕಥೆಯೇ ‘ಕ್ಷೇತ್ರಪತಿ’ ಸಿನಿಮಾವಾಗಿದೆ. ರೈತನ ಸಮಸ್ಯೆ ಕುರಿತಾದ ಸಿನಿಮಾ. ಹೀಗಾಗಿ ಸ್ಯಾಂಡಲ್‌ವುಡ್‌ನಲ್ಲಿ ರೈತರ ಸಮಸ್ಯೆಯ ಕುರಿತಾದ ಕಮರ್ಷಿಯಲ್ ಸಿನಿಮಾವೊಂದು ಶೀಘ್ರವೇ ರಿಲೀಸ್ ಆಗಲಿದೆ. ನವೀನ್ ಶಂಕರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಝಲಕ್ ಕೂಡ ರಿವೀಲ್ ಆಗಿದೆ.

‘ನೋಡಿದವರು ಏನಂತಾರೆ’ ಎಂಬ ಭಿನ್ನ ಕಥೆಯೊಂದರ ಸಿನಿಮಾದಲ್ಲಿ ನಟ ನವೀನ್ ಶಂಕರ್ ಕಾಣಿಸಿಕೊಂಡಿದ್ದಾರೆ. ಈ ಎರಡು ಸಿನಿಮಾ ಬಿಗ್ ಅಪ್‌ಡೇಟ್ ಕೊಡುವ ಮೂಲಕ ಫ್ಯಾನ್ಸ್‌ಗೆ ನವೀನ್‌ ಶಂಕರ್ ಸಿಹಿಸುದ್ದಿ ನೀಡಿದ್ದಾರೆ.‌ ಹೀಗೆ ಬಗೆ ಬಗೆಯ ಪಾತ್ರಗಳ ಮೂಲಕ ನವೀನ್‌ ಚಿತ್ರರಂಗದಲ್ಲಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.