ನಾನಿ ಫ್ಯಾನ್ಸ್‌ಗೆ ಸಿಹಿಸುದ್ದಿ- ಸೆ.9ರಂದು ಹೊರಬೀಳಲಿದೆ ಹೊಸ ಚಿತ್ರದ ಅಪ್‌ಡೇಟ್

ಟಾಲಿವುಡ್ ನಟ ನಾನಿ (Actor Nani) ಸದ್ಯ ಹೊಸ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳಿಗೆ ನಾನಿ ನಟಿಸಲಿರುವ ಮುಂಬರುವ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಗಲಿದೆ. ಈ ಮೂಲಕ ಫ್ಯಾನ್ಸ್‌ ಗುಡ್‌ ನ್ಯೂಸ್‌ ಸಿಗಲಿದೆ. ಇದನ್ನೂ ಓದಿ:ದುಡ್ಡಿದ್ರೆ ಏನಾದರೂ ಮಾಡಬಹುದು ಅನ್ನೋದನ್ನು ನಾನು ಒಪ್ಪಲ್ಲ: ಉಮೇಶ್ ಬಣಕಾರ್

ನಾನಿ ಮತ್ತು ಕನ್ನಡತಿ ಪ್ರಿಯಾಂಕಾ ಮೋಹನ್‌ ನಟನೆಯ ‘ಸೂರ್ಯನ ಸಾಟಡೇ’ ಸಿನಿಮಾ ಆ.29ರಂದು ಬಿಡುಗಡೆಗೆ ಸಿದ್ಧವಾಗಿದೆ. ಇದಕ್ಕಾಗಿ ಚೆನ್ನೈ, ಹೈದರಾಬಾದ್, ಬೆಂಗಳೂರಿಗೆ ಬಂದು ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ ನಟ. ಇದರ ನಡುವೆ ಸಂದರ್ಶನವೊಂದರಲ್ಲಿ ಸೆ.9ರಂದು ಹೊಸ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ ಎಂದು ತಿಳಿಸಿದ್ದಾರೆ ನಾನಿ.

‘ಸಾಹೋ’ ನಿರ್ದೇಶಕ ಸುಜೀತ್ ಜೊತೆ ಮತ್ತು ‘ದಸರಾ’ ಚಿತ್ರದ ಡೈರೆಕ್ಟರ್ ಶ್ರೀಕಾಂತ್ ಒಡೆಲಾ ಜೊತೆ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಇದರ ಬಗ್ಗೆ ಅಫಿಷಿಯಲ್ ಅನೌನ್ಸ್‌ಮೆಂಟ್ ಆಗಲಿದೆ ಎನ್ನಲಾಗಿದೆ. ಅದಕ್ಕಾಗಿ ಸೆ.9ರವರೆಗೂ ಕಾದುನೋಡಬೇಕಿದೆ.