ದುಬೈ ಪ್ರವಾಸದಲ್ಲಿ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ

ಸ್ಯಾಂಡಲ್‌ವುಡ್‌ನ (Sandalwood) ಬಾಲನಟಿ ವಂಶಿಕಾ (Vanshika) ಇದೀಗ ದುಬೈಗೆ ಹಾರಿದ್ದಾರೆ. ದುಬೈನ ಸುಂದರ ಪ್ರದೇಶಗಳಲ್ಲಿ ಅಮ್ಮನ ಜೊತೆ ವಂಶಿಕಾ ಮೋಜು- ಮಸ್ತಿ ಮಾಡ್ತಿದ್ದಾರೆ. ಈ ಕುರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್‌ಗೆ ಸ್ಟಾರ್ ನಟ ಕಮಲ್ ಹಾಸನ್ ವಿಲನ್

‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋನ ವಿನ್ನರ್ ಆಗಿ ಗುರುತಿಸಿಕೊಂಡಿದ್ದ ಮಾಸ್ಟರ್ ಆನಂದ್(Master Anand)- ಯಶಸ್ವಿನಿ ಅವರ ಪುತ್ರಿ ವಂಶಿಕಾ ಚುರುಕುತನಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ. ಆಕೆಯ ಮುದ್ದು ಮಾತು, ಕೀಟಲೆ ಪ್ರತಿಯೊಂದನ್ನ ಅಭಿಮಾನಿಗಳು ಇಷ್ಟಪಡುತ್ತಾರೆ. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2ಗೆ ವಂಶಿಕಾ ಕೂಡ ನಿರೂಪಕಿ ಆಗಿದ್ದರು.

ಸದ್ಯ ವಂಶಿಕಾ, ತಾಯಿ ಯಶಸ್ವಿನಿ ಜೊತೆ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ದುಬೈನ (Dubai) ಪ್ರವಾಸದ ಫೋಟೋಗಳನ್ನ ಮಾಸ್ಟರ್ ಆನಂದ್ ಪತ್ನಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಸಂಭ್ರಮಿಸಿದ್ದಾರೆ.

ಇದೀಗ ಸಿನಿಮಾಗಳಲ್ಲೂ ಸಹ ವಂಶಿಕಾ ಆಕ್ಟೀವ್ ಆಗಿದ್ದಾರೆ. ವಸಿಷ್ಠ ಸಿಂಹ ನಟನೆಯ ಲವ್..ಲಿ, ನಾಲ್ಕನೇ ಆಯಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.