‘ನಾಗ್‌ಜಿಲ್ಲಾ’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್- ಪೋಸ್ಟರ್ ಔಟ್

ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ಮಾಣದ ‘ನಾಗ್‌ಜಿಲ್ಲಾ’ (Naagzilla) ಚಿತ್ರಕ್ಕಾಗಿ ಕಾರ್ತಿಕ್ ಆರ್ಯನ್ (Karthik Aaryan) ಕೈಜೋಡಿಸಿದ್ದಾರೆ. ಈ ಬಾರಿ ಹಾವಿನ ಅವತಾರದಲ್ಲಿ ಕಾರ್ತಿಕ್‌ ಬರುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಇದನ್ನೂ ಓದಿ:ಮುಂದಿನ ಜನ್ಮದಲ್ಲಿ ಪ್ರಭಾಸ್ ನನ್ನ ಮಗನಾಗಬೇಕು: ಹಿರಿಯ ನಟಿ ಜರೀನಾ ವಹಾಬ್

ಮೊದಲ ಬಾರಿಗೆ ರೂಪವನ್ನು ಬದಲಿಸುವ ಹಾವಿನ ಪಾತ್ರದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ. ಅವರ ಪಾತ್ರದ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಈ ಸಿನಿಮಾಗೆ ‘ನಾಗ್‌ಜಿಲ್ಲಾ’ ಎಂದು ಭಿನ್ನವಾಗಿರೋ ಟೈಟಲ್‌ ಇಡಲಾಗಿದೆ. ಈ ಸಿನಿಮಾ ಮುಂದಿನ ವರ್ಷ ಆ.14ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಇದನ್ನೂ ಓದಿ:ಆ್ಯನಿವರ್ಸರಿ ದಿನವೇ ಹೆಣ್ಣು ಮಗುವನ್ನು ಬರಮಾಡಿಕೊಂಡ ನಟ ವಿಷ್ಣು ವಿಶಾಲ್‌, ಜ್ವಾಲಾ ಗುಟ್ಟಾ ದಂಪತಿ

 

View this post on Instagram

 

A post shared by KARTIK AARYAN (@kartikaaryan)

ಸದಾ ಲವರ್‌ ಬಾಯ್ ಪಾತ್ರಗಳಲ್ಲಿ ನಟಿಸುತ್ತಿದ್ದ ಕಾರ್ತಿಕ್ ಈಗ ಹಾವಿನ ಪಾತ್ರಕ್ಕೆ ಜೀವ ತುಂಬಲು ರೆಡಿಯಾಗಿದ್ದಾರೆ. ಅವರಿಗೆ ಮೃಗದೀಪ್ ಸಿಂಗ್ ಲಂಬಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗೆ ಗೌತಮ್ ಮೆಹ್ರಾ ಚಿತ್ರಕಥೆ ಬರೆದಿದ್ದಾರೆ. ಸದ್ಯ ‘ನಾಗ್‌ಜಿಲ್ಲಾ’ ಚಿತ್ರದ ಪೋಸ್ಟರ್ ನೋಡಿ ಸಿನಿಮಾ ಬಗೆಗಿನ ನಿರೀಕ್ಷೆ ಫ್ಯಾನ್ಸ್‌ಗೆ ಹೆಚ್ಚಾಗಿದೆ.

ಅಂದಹಾಗೆ, ಶ್ರೀಲೀಲಾ ಜೊತೆ ‘ಆಶಿಕಿ 3’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ನಟಿಸುತ್ತಿದ್ದಾರೆ. ಬಾಲಿವುಡ್‌ನ ಹಲವು ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿವೆ.