ಬೆಂಗಳೂರು: ಇಂದು ಪುತ್ರ ಗುರುರಾಜ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಂದೆ ಜಗ್ಗೇಶ್ ಮತ್ತು ತಾಯಿ ಪರಿಮಳ ಅವರು ಶುಭಾಶಯವನ್ನು ತಿಳಿಸಿದ್ದಾರೆ.
ಪರಿಮಳ ಜಗ್ಗೇಶ್ ಮತ್ತು ಜಗ್ಗೇಶ್ ಇಬ್ಬರು ಟ್ವೀಟ್ ಮಾಡುವ ಮೂಲಕ ತಮ್ಮ ಮಗನಿಗೆ ಬರ್ತ್ ಡೇ ಶುಭಾಶಯವನ್ನು ಕೋರಿದ್ದಾರೆ. ಮೊದಲಿಗೆ ಪರಿಮಳ ಅವರು, “ಇಂದು ನನ್ನ ಮಗ ಗುರು ಹುಟ್ಟಹಬ್ಬವಾಗಿದೆ. ಕಾಲ ಎಷ್ಟು ಬೇಗ ಉರುಳುತ್ತಿದೆ ಎಂಬುದೆ ತಿಳಿಯುವುದಿಲ್ಲ. ಅಂದು ನಾನು ನನ್ನ ಮಗನಿಗೆ ಮಾತನಾಡುವುದು ಮತ್ತು ನಡೆಯುವುದನ್ನು ಹೇಳಿಕೊಟ್ಟಿದ್ದೆ. ಆದರೆ ಇಂದು ಅವನು ನನಗೆ ಜೀವನದ ಮಾರ್ಗದರ್ಶನ ನೀಡುತ್ತಾನೆ. ನಾನು ಇಂತಹ ಮಗನನ್ನು ಪಡೆದಿದ್ದಕ್ಕೆ ಹೆಮ್ಮೆ ಪಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಪತ್ನಿಯ ಟ್ವೀಟ್ ಗೆ ನಟ ಜಗ್ಗೇಶ್, “ಮಗ ಗುರುರಾಜ ಅಮ್ಮನ ಮೇಷ್ಟ್ರು ಮತ್ತು ನೆಚ್ಚಿನ ಪುತ್ರನಾಗಿದ್ದಾನೆ. ಇಂದು ಅವನು ಹುಟ್ಟಿದ ದಿನವಾಗಿದೆ. ಅಂದು 1987ರಲ್ಲಿ ರಸ್ತೆ ಬದಿ ನಿಂತು ಅವನ ಹುಟ್ಟು ಸಂಭ್ರಮಿಸಿದೆ. ಆಗ ಅಮ್ಮ ಮತ್ತು ಮಗನನ್ನ ಸಾಕಿ ನಾನು ಹೇಗೆ ದಡಸೇರೋದು ಎಂದು ಕೊರಗುತಿದ್ದೆ. ಆದರೆ ರಾಯರ ಪ್ರಸಾದ ನನಗೆ ಅವನು, ಆತ ಬೆಳೆದಂತೆ ನಾನು ಬೆಳೆದೆ. ಒಳ್ಳೆಸಂಸ್ಕಾರ ಕಲಿಸಿದ ತಂದೆಯಾಗಿ ಹೆಮ್ಮೆಯಿದೆ. ಹುಟ್ಟುಹಬ್ಬದ ಶುಭಾಶಯಗಳು ದೇವರು ಒಳ್ಳೆಯದು ಮಾಡಲಿ” ಎಂದು ರೀಟ್ವೀಟ್ ಮಾಡಿದ್ದಾರೆ.
ಪರಿಮಳ ಅವರು ಮೊತ್ತೊಂದು ಟ್ವೀಟ್ ಮಾಡಿದ್ದು, “ಗುರು ಹುಟ್ಟಿದಾಗ ನಮಗೆ ಕುಟುಂಬದ ಯಾರೋಬ್ಬರು ಸಹಾಯ ಮಾಡಲಿಲ್ಲ. ಜಗ್ಗೇಶ್ ಒಬ್ಬರೆ ಮಗು ಮತ್ತು ನನ್ನ ಬಾಣಂತನವನ್ನು ಕಾಳಜಿಯಿಂದ ಮಾಡಿದ್ದರು. ಅಂದಿನ ಕಾಲದಲ್ಲಿ ಯಾವುದೇ ಡೈಪರ್ ಕೂಡ ಇರಲಿಲ್ಲ. ಮಣ್ಣಾದ ಬಟ್ಟೆಯನ್ನು ಅವರೇ ತೊಳೆಯುತ್ತಿದ್ದರು. ಜೊತೆಗೆ ಮೂರು ವರ್ಷದ ಮಗುವಿಗೆ ಸ್ನಾನ ಕೂಡ ಮಾಡಿಸಿದ್ದಾರೆ. ನಿಜಕ್ಕೂ ಹೆಮ್ಮೆಯಾಗುತ್ತದೆ” ಎಂದು ಬರೆದು ಪತಿಗೆ ಟ್ಯಾಗ್ ಮಾಡಿದ್ದಾರೆ.
🙌🙏🤘👍ಅಪ್ಪನ ಬೆಲೆ ಅಪ್ಪನಾದಾಗ
ಅರಿವು..
ಹಾರಾಡಿ ಹುಡುಕಿ ತಡಕಿ ಕಾಳುತಂದು!
ಕಾದ ಮರಿಹಕ್ಕಿಗೆ ತುತ್ತುಣ್ಣಿಸುವ ಪಕ್ಷಿಗೆ ಆ ಕಾಯಕ ಕಲಿಸಿದವರು ಯಾರು?
ತಂದೆಯ ಕಾರ್ಯ ತಿನ್ನಿಸುವುದು ಒಂದೆ ಅಲ್ಲಾ!ತಾನು ಮುಂದೆ ತನ್ನವರಿಗೆ ತಿನ್ನಿಸಿ ಕಲಿಸಿ ತನ್ನ ಕುಲದ ಗೌರವ ನಾಲ್ಮಡಿಗೊಳಿಸುವ ಸಾಧಕನ ಮಾಡುವುದೆ ಶ್ರೇಷ್ಟ ತಂದೆಪರಂಪರೆ..#ಅಪ್ಪಅಮ್ಮದೇವರು. https://t.co/DTcgQaB2Od— ನವರಸನಾಯಕ ಜಗ್ಗೇಶ್ (@Jaggesh2) January 5, 2019
ಇದಕ್ಕೆ ಜಗ್ಗೇಶ್, “ಅಪ್ಪನ ಬೆಲೆ ಅಪ್ಪನಾದಾಗ ಅರಿವಾಗುತ್ತದೆ. ಹಾರಾಡಿ ಹುಡುಕಿ ತಡಕಿ ಕಾಳುತಂದು, ಕಾದ ಮರಿಹಕ್ಕಿಗೆ ತುತ್ತುಣ್ಣಿಸುವ ಪಕ್ಷಿಗೆ ಆ ಕಾಯಕ ಕಲಿಸಿದವರು ಯಾರು? ತಂದೆಯ ಕಾರ್ಯ ತಿನ್ನಿಸುವುದು ಒಂದೇ ಅಲ್ಲಾ, ತಾನು ಮುಂದೆ ತನ್ನವರಿಗೆ ತಿನ್ನಿಸಿ, ಕಲಿಸಿ ತನ್ನ ಕುಲದ ಗೌರವ ನಾಲ್ಮಡಿಗೊಳಿಸುವ ಸಾಧಕನ ಮಾಡುವುದೆ ಶ್ರೇಷ್ಟ ತಂದೆ ಪರಂಪರೆಯಾಗಿದೆ” ಎಂದು ರೀಟ್ವೀಟ್ ಮಾಡಿದ್ದಾರೆ.
ಅಮ್ಮನ ಮೇಷ್ಟ್ರು.ಅಮ್ಮನ ನೆಚ್ಚು.
ಮಗ ಗುರುರಾಜ!ಇಂದು ಅವನು ಹುಟ್ಟಿದದಿನ!ಅಂದು1987ರಲ್ಲಿ ರಸ್ತೆಬದಿ ನಿಂತು ಅವನ ಹುಟ್ಟುಸಂಭ್ರಮಿಸಿ!ಹೇಗೆ ಅಮ್ಮಮಗನ ಸಾಕಿ ನಾನು ದಡಸೇರೋದು ಎಂದು ಕೊರಗುತ್ತಿದ್ದೆ!ರಾಯರ ಪ್ರಸಾದ ನನಗೆ ಅವನು!ಆತ ಬೆಳೆದಂತೆ ನಾನು ಬೆಳೆದೆ!
ಒಳ್ಳೆಸಂಸ್ಕಾರ ಕಲಿಸಿದ ತಂದೆಯಾಗಿ ಹೆಮ್ಮೆಯಿದೆ.ಹು.ಹ.ಶುಭಾಷಯಗಳು ಮಗನೆ God bless:) https://t.co/G57xvVKSse— ನವರಸನಾಯಕ ಜಗ್ಗೇಶ್ (@Jaggesh2) January 5, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply