ಬೆಂಗಳೂರು: ಗೋಹತ್ಯೆ ಪರ ಇರುವವರಿಗೆ ನವರಸ ನಾಯಕ ನಟ ಜಗ್ಗೇಶ್ ತಮ್ಮ ಡೈಲಾಗ್‍ನಲ್ಲೇ ಟಾಂಗ್ ನೀಡಿದ್ದಾರೆ.
ಹಿಂದೂಗಳ ಬಗ್ಗೆ ದೇವರು, ನಂಬಿಕೆ ಬಗ್ಗೆ ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಚರ್ಚೆ ಮಾಡ್ತಾರೆ. ಇದನ್ನ ಜನ ಕಣ್ಣು ಬಿಟ್ಟು ನೋಡ್ತಾರೆ. ಈ ಮನಸ್ಥಿತಿಯನ್ನು ಮೊದಲು ಜನ ಬದಲಿಸಿಕೊಳ್ಳಬೇಕು. ಭಗವದ್ಗೀತೆ ಎಲ್ಲಿದೆ, ದೇವರು ಎಲ್ಲಿದೆ. ಆದ್ರೂ ನಾವು ಗೋಮಾಂಸ ತಿನ್ನುತ್ತೇವೆ ಅಂತಾರೆ ಎಂದು ನಟ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಅನುಮತಿಯಿಲ್ಲದೇ ಸರ್ಕಾರಿ ಸಭಾಂಗಣದಲ್ಲಿ ಗೋಮಾಂಸ ಸೇವನೆ- ನೊಟೀಸ್ ಜಾರಿಗೆ ಡಿಸಿ ನಿರ್ಧಾರ
ಬೇರೆ ಧರ್ಮದ ಬಗ್ಗೆ ಯಾರಾದ್ರು ಮಾತಾಡಿದ್ರೆ ದೊಡ್ಡ ಗಲಾಟೆಗಳೇ ನಡೆದು ಹೋಗುತ್ತವೆ. ಯಾರೊಬ್ಬರೂ ಬೇರೆ ಧರ್ಮದ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಹಿಂದೂಗಳು ಮಾತ್ರ ಇಂದು ಕಲಬೆರೆಕೆಗಳು ಆಗಿದ್ದಾರೆ ಅಂತಾ ಗೋಮಾಂಸ ತಿನ್ನುವವರ ವಿರುದ್ಧ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=NhSD2P0Arr4



Leave a Reply