ಮುಗಿಯದ ರಮ್ಯಾ-ಜಗ್ಗೇಶ್ ಟ್ವೀಟ್ ಜಗಳ – ಫೇಕ್ ಪಾಠ ಹಿಡಿದು ಜಗ್ಗಾಡಿದ ನಟ

ಬೆಂಗಳೂರು: ನವರಸ ನಾಯಕ ಜಗ್ಗೇಶ್, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮಧ್ಯೆಯ ಟ್ವಿಟ್ಟರ್ ವಾರ್ ಮುಂದುವರಿದಿದೆ. ಮಂಗಳವಾರ ಮಾಜಿ ಸಂಸದೆ ರಮ್ಯಾ ಫೇಕ್ ಫೇಸ್‍ಬುಕ್ ಅಕೌಂಟ್ ಬಗ್ಗೆ ಪಾಠ ಮಾಡಿದ್ದಕ್ಕೆ ಜಗ್ಗೇಶ್ ಟೀಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫೇಕ್ ಖಾತೆ ಹೊಂದಿದ್ರೆ ತಪ್ಪಲ್ಲ : ರಮ್ಯಾ ಮೇಡಂ ಪಾಠದ ವಿಡಿಯೋ ಫುಲ್ ವೈರಲ್

ಇದು ಫೇಕ್‍ಗಳನ್ನು ತಯಾರಿಸಿ ವೈರಲ್ ಮಾಡಿ ಬದಕೋ ಫೇಕ್‍ಗಳು. ಇನ್ಮುಂದೆ ನಿಮ್ ಆಟ ಬಂದ್. ಮಹಾಜನತೆಗೆ ಅರಿವಾಯಿತು ಫೇಕ್ ನಾಟಕ ಕಂಪನಿ ಎಂದು ಟಾಂಗ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಕೆಲವರಿಗೆ ಮರ್ಮಕಲೆಯ ಹೆಣ್ಣಿನ ಮುಖವಾಡದ ಮಗಳು ಬೇಕಂತೆ. ಏನ್ ಕರ್ಮ ರೀ ಈ ದೇಶ ಎಂದು ನಟ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫೇಕ್ ಅಕೌಂಟ್ ಪಾಠದ ವಿಡಿಯೋ ಬಗ್ಗೆ ರಮ್ಯಾ ಮೇಡಂ ಹೀಗಂದ್ರು

ಸರಣಿ ಟ್ವೀಟ್‍ಗಳ ಮೂಲಕ ಪದ್ಮಾವತಿಗೆ ಜಗ್ಗೇಶ್ ಪರೋಕ್ಷ ಟಾಂಗ್ ನೀಡಿದ್ದಾರೆ. ಫೇಕ್ ಅಕೌಂಟ್‍ಗಳ ಬಗ್ಗೆ ಪಾಠ ಕಲಿಸುವ ಸಭ್ಯಸ್ಥೆಯನ್ನು ಕಣ್ಣಗಲಿಸಿ ನೋಡಿ. ಇವಳ ಪಾಠ ಕಲಿತು ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಾಂತಿ ಮಾಡುವವರು ಇವರೆ!. ಹೇಗೆ ತಯಾರು ಮಾಡ್ತಾರೆ ನೋಡಿ ಅರ್ಧಬೆಂದ ಮಡಿಕೆಗಳ..! ಅಂತ ರಮ್ಯಾ ಹೆಸರೇಳದೇ ಕ್ಯಾಚ್ ಆಫೀಸರ್ ಎಂದು ಜರಿದಿದ್ದಾರೆ. ಇದನ್ನೂ ಓದಿ: ಈಕೆ ಯಾರು? ಸಾಧನೆ ಏನು? ಕನ್ನಡ ಬಾರದ ಕಾಡುಪಾಪ- ಮೋದಿ ಕಾಲೆಳೆದ ರಮ್ಯಾ ವಿರುದ್ಧ ಜಗ್ಗೇಶ್ ಕಿಡಿ

ಒಟ್ಟಿನಲ್ಲಿ ರಮ್ಯಾ ಅವರ `ಮಾದಕದ್ರವ್ಯದ ನಶೆ’ ಟ್ವೀಟ್‍ನಿಂದ ಇದೀಗ ಜಗ್ಗೇಶ್-ರಮ್ಯಾ ಟ್ವೀಟ್ ವಾರ್ ತೀವ್ರ ಸ್ವರೂಪ ಪಡೆದಿದೆ.

Comments

Leave a Reply

Your email address will not be published. Required fields are marked *