ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆ ಬೇಡ, ಎಚ್ಚರವಾಗಿರಿ ಕಲಾಬಂಧುಗಳೇ- ಜಗ್ಗೇಶ್ ಕಿವಿ ಮಾತು

ಬೆಂಗಳೂರು: ಮದರಕರಿ ನಾಯಕನ ಕುರಿತ ಚಿತ್ರದಿಂದಾಗಿ ಸ್ಯಾಂಡಲ್‍ವುಡ್ ನಲ್ಲಿ ಜಾತಿಗಳ ಆರಂಭಗೊಂಡಿದ್ದು, ಈ ವಿವಾದಕ್ಕೆ ನಟ ಜಗ್ಗೇಶ್ ಟ್ವೀಟ್ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ನಟ ಜಗ್ಗೇಶ್ ಅವರು “ಶಾರದೆಯ ಕಲಾದೇಗುಲ ಚಿತ್ರರಂಗ ಜಾತಿ ರಹಿತ ಪುಣ್ಯಧಾಮ. ಕಲೆಗೆ ಜಾತಿಯಿಲ್ಲ. ವಿಶ್ವದಲ್ಲೇ ಜಾತಿ ಇಲ್ಲದೇ ಒಂದೆತಾಯಿ ಮಕ್ಕಳಂತೆ ಬದುಕುವ ಸ್ಥಳ ಶಾರದೆಯ ಮಡಿಲು. ಇಂಥ ಪವಿತ್ರ ಜಾಗದಲ್ಲಿ ಜಾತಿ ವಿಷಬೀಜ ನೆತ್ತುವರು ಅಳಿವಿನ ಅಂಚಿಗೆ ಸರಿಯುತ್ತಾರೆ. ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆ ಬೇಡ. ವಿನಾಶಕಾಲಕ್ಕೆ ವಿಪರೀತಬುದ್ಧಿ. ಎಚ್ಚರವಾಗಿರಿ ಕಲಾಬಂಧುಗಳೇ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ಜಾತಿ ಜಗಳ – ವೀರ ಮದಕರಿ ಸಿನಿಮಾಗೆ ಮತ್ತೊಂದು ಸಂಕಷ್ಟ!

ವೀರ ಮದಕರಿ ಸಿನಿಮಾ ಸೆಟ್ಟೇರುವುದಕ್ಕೆ ಮೊದಲೇ ಈಗ ಜಾತಿ ವಿಚಾರದಲ್ಲಿ ಸಂಘರ್ಷ ಆರಂಭವಾಗಿದೆ. ಮದಕರಿ ನಾಯಕನ ಪಾತ್ರವನ್ನು ಸುದೀಪ್ ಮಾಡಬೇಕು ಅಂತ ವಾಲ್ಮೀಕಿ ಸಮುದಾಯ ಧ್ವನಿ ಎತ್ತಿತ್ತೋ ದರ್ಶನ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಸಿನಿಮಾಗೆ ಜಾತಿ ಸ್ಪರ್ಶ ಮಾಡುವುದು ಅದೆಷ್ಟು ಸರಿ? ಕಲೆಗೆ ಅದ್ಯಾವ ಜಾತಿ ಇದೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಘರ್ಷಕ್ಕೆ ಇಳಿದಿದ್ದಾರೆ.

ವೀರ ಮದಕರಿ ಸಿನಿಮಾ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಾಪಕ ಮುನಿರತ್ನ, ನಟ ದರ್ಶನ್ ಮತ್ತು ಸುದೀಪ್ ಸ್ಯಾಂಡಲ್ ವುಡ್‍ನ ದೊಡ್ಡ ನಟರು. ಚಿತ್ರರಂಗದ ನಟನರ ನಡುವೆ ಜಾತಿ ತರುವುದು ಬೇಡ. ಸುದೀಪ್ ಹಾಗೂ ದರ್ಶನ್ ನಡುವೆ ಮದಕರಿ ಚಿತ್ರ ವಿವಾದ ತಂದಿದೆ. ಕಲೆಗೆ ಜಾತಿ ಇಲ್ಲ, ಜಾತಿಯನ್ನು ಬಿಂಬಿಸುವುದು ತಪ್ಪು. ಸಿನಿಮಾಗೆ ಜಾತಿಯನ್ನು ತರಬಾರದು. ಕಲೆಯನ್ನು ಕಲೆಯಾಗಿ ನೋಡಬೇಕು. ರಾಜಕೀಯದಲ್ಲಿ ಜಾತಿ ಬಂದು ಹಾಳಾಗಿದೆ ಈಗ ಸಿನಿಮಾಕ್ಕೆ ಜಾತಿ ತರುವುದು ಬೇಡ. ರಾಜ್ ಕುಮಾರ್ ಅವರ ಕಾಲದಲ್ಲಿ ಅನೇಕ ಸಿನಿಮಾಗಳು ಬಂದಿತ್ತು. ಆಗ ಜಾತಿ ಇರಲಿಲ್ಲ ಈಗ ಜಾತಿಯ ನಂಟನ್ನು ತರಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *