ಬೆಂಗಳೂರು: ರಾಜ್ಯ ಸರ್ಕಾರದ ನೇತೃತ್ವದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದು, ಇಂದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಲ್ಲಿ ಅದರ ಅಸಲಿಯತ್ತನ್ನು ಬೆಳಗ್ಗಿನಿಂದಲೇ ನಿರಂತರವಾಗಿ ಪ್ರಸಾರ ಮಾಡಿತ್ತು.
ಈ ಕಾರ್ಯಕ್ಕೆ ನಟ ಜಗ್ಗೇಶ್ ಟ್ವೀಟ್ ಮೂಲಕ ಪಬ್ಲಿಕ್ ಟಿವಿಯನ್ನು ಶಾಘಿಸಿದ್ದಾರೆ. `ನಿಮ್ಮ ಧೈರ್ಯ ಮೆಚ್ಚುವಂತದ್ದು. ಸತ್ಯ ಬಯಲಿಗೆಳೆದ ನಿಮ್ಮ ಕಾರ್ಯ ಶ್ಲಾಘನೀಯ. ಅರಿವಾಗಲಿ ಜಸಸಾಮಾನ್ಯರಿಗೆ ವೋಟ್ ಬ್ಯಾಂಕ್, ರಾಜಕೀಯ ಹಿಂದಿರೋ ಅಸಲಿಬಣ್ಣ’ ಅಂತ ಹೇಳಿದ್ದಾರೆ.
`ಡೊಂಗಿಗಳ ಅಸ್ತ್ರವೇ ಹಾರಾಟ ಕಿರುಚಾಟದಿಂದ ಬಾಯಿ ಮುಚ್ಚಿಸುವ ತಂತ್ರ. ಜನ ಪ್ರಜ್ಞಾವಂತರು ಅವರ ತಂತ್ರ ಅವರಿಗೆ ತಿರುಗಿಸುತ್ತಾರೆ. ತಾಳ್ಮೆಯಿಂದ ಕಾಯಬೇಕು’ ಅಂತ ಮತ್ತೊಂದು ಟ್ವೀಟ್ ಮೂಲಕ ಅವರು ಹೇಳಿದ್ದಾರೆ.
ಹಸಿವುಮುಕ್ತ ರಾಜ್ಯವನ್ನಾಗಿಸಬೇಕು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ಹೇಳಿತ್ತು. ಅಂತೆಯೇ ಇತ್ತೀಚೆಗಷ್ಟೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಚಾಲನೆ ನೀಡಿದ್ರು. ಇದಾದ ಎರಡು ದಿನಗಳಲ್ಲಿ ಪಬ್ಲಿಕ್ ಟಿವಿ ಸರ್ಕಾರದ ಬಣ್ಣ ಬಯಲು ಮಾಡಿತ್ತು.
ಇಂದಿರಾ ಕ್ಯಾಂಟೀನ್ ಅಸಲಿ ಮುಖವಾಡವನ್ನು ಬಯಲಿಗೆ ಎಳೆದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪಬ್ಲಿಕ್ ಟಿವಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇಂದಿರಾ ಕ್ಯಾಂಟೀನ್ಗಾಗಿ ಮದುವೆ ಮನೆಯಲ್ಲಿ ಊಟ ತಯಾರಿ- ರಿಯಾಲಿಟಿ ಚೆಕ್ ವೇಳೆ ಗೂಂಡಾಗಿರಿ https://t.co/CDtf3jMqsb#Bengaluru #IndiraCanteen #MarriageHall pic.twitter.com/LDQXnNmO85
— PublicTV (@publictvnews) August 18, 2017
@divyaspandana , @OfficeOfRG , ವಾಂಗೀ ಬಾತ್ ಕುವರಿ, ಇದಕ್ಕೇನಂತೀರಿ?..# ಯಾರೋದ್ದೊ ದುಡ್ಡು, ಇಂದಿರಮ್ಮನ ಜಾತ್ರೆ.@Jaggesh2
— Rinchen (@RidhanyaRinchan) August 18, 2017
https://twitter.com/ajvijay04/status/898464321860063232
https://twitter.com/bashyakar/status/898456687081684992
https://twitter.com/Sandeshmysuru/status/898419174879264770
ಈ ಕೊಳಕು ಊಟಕ್ಕೆ ನಮ್ಮ ಪರಮು ಪಪ್ಪುಗೆ ೧೦ರೂ. ಸಾಲ ಬೇರೆ ಕೊಟ್ಟಿದೆ. ಸಾಲ ಮಾಡಿ ತಿನ್ನೋಂಥ ಊಟಾನಾ ಇದು.
ಯಾಕ್ರೀ ಜನಗಳನ್ನ ಸಾಯಿಸ್ತೀರ?— A.S Vijayanarasimha (@ASVijayanarasi1) August 18, 2017
https://twitter.com/Sunil_Naik1/status/898499233984126978

Leave a Reply