ಬೆಂಗಳೂರು: ಕರ್ನಾಟಕ ಕುರುಕ್ಷೇತ್ರ ಪ್ರಚಾರ, ಮತದಾನ ಎಲ್ಲವೂ ಮುಗಿದಿದೆ. ಇನ್ನೇನು ಚುನಾವಣಾ ಫಲಿತಾಂಶಕ್ಕಾಗಿ ಎಲ್ಲ ಅಭ್ಯರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ಈ ಬಾರಿ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿಯೇ ಅತಿ ಕಡಿಮೆ ಮತದಾನವಾಗಿದ್ದಕ್ಕೆ ನಟ, ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಜಗ್ಗೇಶ್ ಟ್ವಿಟ್ಟರ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
‘ಏನ್ ವೋಟ್ ಹಾಕಿದ್ದಾರೆ ಸಿಟಿ ಜನಗಳೇ, ಶಹಬಾಷ್ ಜೈ ಬೆಂಗಳೂರಿನ ವಾಸಿಗಳೆ!, ಏನು ಬದ್ಧತೆ, ಏನು ಪ್ರೇಮ, ಏನು ಸ್ವಾಭಿಮಾನ? ಅಂತರಾಷ್ಟ್ರದ ಗುಣಮಟ್ಟ ಬೇಕು ಅಂತಾ ಕೇಳ್ತಿರಿ. ಟಿವಿ ಕಂಡರೆ ಸಾಕು ಏನು ವಾದ ಮಂಡನೆ.. ಮೆಚ್ಚಬೇಕು. ಹಳ್ಳಿಯಲ್ಲಿ ದುಡ್ಡಿಗೆ ವೋಟ್. ಸಿಟಿಯಲ್ಲಿ ಬೂತ್ ಕಡೆನೂ ತಿರುಗಿ ಸಹ ನೋಡಲ್ಲ. ಹೇಗೆ ಬದಲಾವಣೆ.. ಯಾರಿಂದ ಬದಲಾವಣೆ…ಯಾಕೆ ಬದಲಾವಣೆ…. ನಗೆ ಬರುತ್ತಿದೆ ಅಂತಾ ಬರೆದುಕೊಂಡು ಬೆಂಗಳೂರು ಕೇತ್ರಗಳಲ್ಲಿ ಮತದಾನದ ಶೇಕಡಾವಾರು ಮಾಹಿತಿಯುಳ್ಳ ಫೋಟೋ ಹಾಕಿಕೊಂಡು ಟ್ವೀಟ್ ಮಾಡಿದ್ದಾರೆ.
ರಾಮನಗರದಲ್ಲಿ ಅತೀ ಹೆಚ್ಚು ಶೇ.84 ಮತದಾನವಾದರೆ ಬೆಂಗಳೂರಿನಲ್ಲೇ ಅತೀ ಕಡಿಮೆ ಶೇ.50 ಮತದಾನವಾಗಿದೆ. ಗ್ರಾಮೀಣ ಭಾಗಗಳಷ್ಟು ಮತದಾನವು ಬೆಂಗಳೂರು ನಗರದಲ್ಲಿ ಆಗಿಲ್ಲ. ಬೆಂಗಳೂರಿನಲ್ಲಿ ಕೇವಲ 50 ಪರ್ಸೆಂಟ್ ಮತದಾನವಾಗಿದೆ. ಐಟಿ-ಬಿಟಿಗಳಿಗೆ ಶನಿವಾರ, ಭಾನುವಾರ ರಜಾ ಹಿನ್ನೆಲೆ ಬೆಂಗಳೂರಿಗರು ಮತ ಹಾಕಲು ಮನಸು ಮಾಡಿಲ್ಲ. 2 ದಿನ ರಜಾ ಹಿನ್ನೆಲೆ ಎಲ್ಲರೂ ಟ್ರಿಪ್ ಅಂತಾ ತೆರಳಿದ್ರು. ಚುನಾವಣಾ ಆಯೋಗ, ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದ್ರೂ ಮತದಾನ ಪ್ರಮಾಣ 50ಕ್ಕಿಂತ ಹೆಚ್ಚು ದಾಟದಿರುವುದು ವಿಷಾದನೀಯ.
ಏನ್ ಓಟ ಹಾಕಿದ್ದಾರೆ city ಜನ..
ಶಹಭಾಸ್ ಜೈ ಬೆಂಗಳೂರು ವಾಸಿಗಳೆ
ಏನ್ ಬಧ್ಧತೆ..ಏನ್ ಪ್ರೇಮ..ಏನ್ ಸ್ವಾಭಿಮಾನ..ಅಂತರರಾಷ್ಟ್ರದ ಗುಣಮಟ್ಟ ಬೇಕು.tvಕಂಡರೆ ಸಾಕು ಏನು ವಾದಮಂಡನೆ..ಮೆಚ್ಚಬೇಕು ಬಧ್ಧತೆ..ಹಳ್ಳಿಯಲ್ಲಿ ದುಡ್ಡಿಗೆvote..
Cityಯಲ್ಲಿ boothತಿರುಗಿ ನೋಡಲ್ಲಾ.
ಹೇಗೆ ಬದಲಾವಣೆ..ಯಾರಿಂದ ಬದಲಾವಣೆ..ಯಾಕೆ ಬದಲಾವಣೆ..
ನಗುಬರುತ್ತಿದೆ. pic.twitter.com/2hZ6mPI9c0— ನವರಸನಾಯಕ ಜಗ್ಗೇಶ್ (@Jaggesh2) May 13, 2018

Leave a Reply