ಫಿಟ್ ನೆಸ್ ವಿಡಿಯೋ ಅಪ್ಲೋಡ್ ಮಾಡಿ ಪ್ರಧಾನಿಗೆ ನಟ ಜಗ್ಗೇಶ್ ಚಾಲೆಂಜ್!

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫಿಟ್ ನೆಸ್ ಚಾಲೆಂಜ್ ಭಾರೀ ಸದ್ದು ಮಾಡುತ್ತಿದೆ. ಈಗ ನಟ ಜಗ್ಗೇಶ್ ಫಿಟ್ ನೆಸ್ ವಿಡಿಯೋ ಹಾಕಿ ಪ್ರಧಾನಿ ಮೋದಿಗೆ ಸವಾಲ್ ಹಾಕಿದ್ದಾರೆ.

ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಹಾಕಿದ `ಹಮ್ ಫಿಟ್ ತೋ ಇಂಡಿಯಾ ಫಿಟ್’ ಸವಾಲನ್ನು ಒಬ್ಬೊಬ್ಬರಂತೆ ಬಹಳಷ್ಟು ಸೆಲಬ್ರಿಟಿಗಳು ಸ್ವೀಕರಿಸಿದ್ದಾರೆ. ಈಗ ನವರಸ ನಾಯಕ ನಟ ಜಗ್ಗೇಶ್ ಕೂಡಾ ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿ ವಿಡಿಯೋ ಅಪ್ಲೋಡ್ ಮಾಡಿ ಪ್ರಧಾನಿಗೆ ಸವಾಲು ಹಾಕಿದ್ದಾರೆ.

ರಾಜವರ್ಧನ್ ಸಿಂಗ್ ರಾಥೋಡ್ ವಿರಾಟ್ ಕೊಹ್ಲಿ ಫಿಟ್ ನೆಸ್ ಚಾಲೆಂಜ್ ಹಾಕಿದ್ದರು. ಅವರು ಪ್ರಾದಾನಿ ಮೋದಿ, ಪತ್ನಿ ಅನುಷ್ಕಾ ಶರ್ಮಾಗೆ ಹಾಕಿದ್ದರು. ಕೊಹ್ಲಿ ಹಾಕಿದ್ದ ಚಾಲೆಂಜ್ ಅನ್ನು ಮೋಧಿ ಸ್ವೀಕರಿಸಿದ್ದರು. ಅದರ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೋದಿಗೆ ಒಂದು ಸವಾಲ್ ಹಾಕಿದ್ದರು. ಹೀಗೆ ಫಿಟ್ ನೆಸ್ ಚಾಲೆಂಜ್ ಮುಂದುವರಿದಿದ್ದು, ಅನೇಕ ರಾಜಕೀಯ ನಾಯಕರು, ಸಿನಿಮಾ ನಟ-ನಟಿಯರು ಈ ಚಾಲೆಂಜ್ ಸ್ವೀಕರಿಸಿದ್ದರು.

ಮೈಸೂರಿನ ಸಂಸದ ಪ್ರತಾಪ್ ಸಿಂಹ ಕೂಡ ಈ ಚಾಲೆಂಜ್ ಸ್ವೀಕರಿಸಿದ್ದರು. ಈಗ ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ನಲ್ಲಿ “ನನ್ನ ಬಾಲ್ಯದಿಂದ ತಪ್ಪದೆ ನಾನು ಮಾಡುವ ದಂಡ ಬೈಟಕ್. ದಿನ ತಪ್ಪದೆ 50 ದಂಡ ಬೈಟಕ್ ಮಾಡುವೆ ಇದರಿಂದ ಸಂಪೂರ್ಣ ದೇಹದ ಮಾಂಸಖಂಡಕ್ಕೆ ಸಳೆತವಾಗಿ ತೋಳು ಪಕ್ಕೆ ಸೊಂಟ ತೊಡೆದ ಹಾಗು ಪಾದ ಹದ್ದುಬಸ್ತಿನಲ್ಲಿರುತ್ತದೆ. ಆ ಕಾಲದ ಗರಡಿಮನೆ ತಾಲೀಮು. 55 ರಲ್ಲೂ ಮುಂದುವರೆದಿದೆ. ದೈಹಿಕ ದಂಡನೆ. ಶುಭರಾತ್ರಿ ಸವಿಗನಸು” ಎಂದು ಬರೆದು ಡಿಪ್ಸ್ ಹೊಡೆಯುತ್ತಿರುವ ವಿಡಿಯೋ ಹಾಕಿ ಪೋಸ್ಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *