ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜಾಹುಲಿಯ ಕುಚುಕು ಗೆಳೆಯ

ಬೆಂಗಳೂರು: ರಾಜಾಹುಲಿಯ ಕುಚುಕು ಗೆಳೆಯ ನಟ ಹರ್ಷವರ್ಧನ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಾಡೆಲ್ ಐಶ್ವರ್ಯ ಅವರೊಂದಿಗೆ ಇಂದು ಹರ್ಷವರ್ಧನ್ ತಿರುಪತಿಯಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಇದೇ ತಿಂಗಳ 8ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ರಾಜಾಹುಲಿ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಸ್ನೇಹಿತರಾಗಿ ಕಾಣಿಸಿಕೊಂಡಿದ್ದ ಹರ್ಷವರ್ಧನ್ ಮಾಡೆಲ್ ಐಶ್ವರ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೇ ವರ್ಷ ಮೇ ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಹರ್ಷವರ್ಧನ್ ಮತ್ತು ಮಾಡೆಲ್ ಐಶ್ವರ್ಯ ಅವರ ನಿಶ್ಚಿತಾರ್ಥ ನೆರವೇರಿತ್ತು.

ಹರ್ಷವರ್ಧನ್ `ಮೊಗ್ಗಿನ ಮನಸ್ಸು’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಮೊಗ್ಗಿನ ಮನಸ್ಸು ಸಿನಿಮಾ ನಂತರ, ರಾಜಹುಲಿ, ಗಜಪಡೆ ಹೀಗೇ ಕೆಲವು ಸಿನಿಮಾಗಳಲ್ಲಿ ಹರ್ಷವರ್ಧನ್ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೇ ಪುನೀತ್ ರಾಜ್ ಕುಮಾರ್ ಜೊತೆ `ಪವರ್’ ಸಿನಿಮಾದಲ್ಲಿ ಕೂಡಾ ಅಭಿನಯಿಸಿದ್ದಾರೆ. ಆದರೆ ಯಶ್ ಅಭಿನಯದ `ರಾಜಾಹುಲಿ’ ಸಿನಿಮಾದಲ್ಲಿ ಹರ್ಷವರ್ಧನ ಯಶ್ ಸ್ನೇಹಿತನಾಗಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. `ರಘುವೀರ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಹರ್ಷ ಅವರು ಅಭಿನಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *