ಶಾಸಕ ಸಿ.ಟಿ ರವಿ ಮನೆಗೆ ನಟ ಗುರು ನಂದನ್ ಭೇಟಿ

ಬೆಂಗಳೂರು: ಶಾಸಕ ಸಿಟಿ ರವಿ ಕಾರು ಅಪಘಾತದ ಹಿನ್ನೆಲೆಯಲ್ಲಿ ನಟ ಫಸ್ಟ್ ರ್‍ಯಾಂಕ್ ರಾಜು ಖ್ಯಾತಿಯ ನಟ ಗುರು ನಂದನ್ ಆರೋಗ್ಯ ವಿಚಾರಿಸಲು ರವಿ ಮನೆಗೆ ಭೇಟಿ ನೀಡಿದ್ದರು.

ಅಪಘಾತದಲ್ಲಿ ಗಾಯಗೊಂಡಿದ್ದ ಶಾಸಕ ಸಿ.ಟಿ ರವಿ ಅವರನ್ನು ಭೇಟಿ ಮಾಡಲು ನಟ ಗುರು ನಂದನ್ ಮನೆಗೆ ಹೋಗಿದ್ದಾರೆ. ಆದರೆ ರವಿ ಅವರು ವಿಶಾಂತ್ರಿ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಮಾತನಾಡಲು ಸಾಧ್ಯವಾಗದೇ ಮನೆಯಿಂದ ವಾಪಸ್ಸು ಹೋಗಿದ್ದಾರೆ. ಇದನ್ನೂ ಓದಿ: ಅಪಘಾತದ ಬಗ್ಗೆ ಶಾಸಕ ಸಿ.ಟಿ ರವಿ ಸ್ಪಷ್ಟನೆ

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ನಟ ಗುರು ನಂದನ್, ನನಗೆ ಇದರ ಬಗ್ಗೆ ಏನು ಗೊತ್ತಿಲ್ಲ. ಮಾಧ್ಯಮಗಳ ಮೂಲಕ ಅಪಘಾತದ ಬಗ್ಗೆ ತಿಳಿದುಕೊಂಡು ಅಣ್ಣನನ್ನು ಮತನಾಡಿಸಲು ಬಂದೆ. ಆದರೆ ಮಾತನಾಡಿಸಲು ಅವರು ಸಿಗಲಿಲ್ಲ. ಸಿಟಿ ರವಿ ಅವರು ನನಗೆ ದೂರದ ಸಂಬಂಧಿ. ಸೋಮವಾರ ಬೆಳಗಿನ ಜಾವ ಸುಮಾರು 3 ಗಂಟೆಯಲ್ಲಿ ಅಪಘಾತವಾಗಿದೆ ಎಂದು ಮಾಹಿತಿ ತಿಳಿದಿದೆ. ಸದ್ಯಕ್ಕೆ ಅವರು ಇಂಜೆಕ್ಷನ್ ತೆಗೆದುಕೊಂಡು ಮಲಗಿದ್ದಾರೆ. ಅವರು ರೆಸ್ಟ್ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

ನಾನು ಬೆಳಗ್ಗೆ ಜಿಮ್‍ನಲ್ಲಿ ಇದ್ದೆ. ಆಗ ಟಿವಿಯಲ್ಲಿ ಈ ಬಗ್ಗೆ ಗೊತ್ತಾಯಿತು. ಫೋನ್ ಮಾಡುವುದು ಬೇಡ ಅಂತ ಮನೆಗೆ ನೇರವಾಗಿ ಬಂದೆ. ಆದರೆ ಅವರ ಮನೆಯಲ್ಲಿ ಯಾರು ಇಲ್ಲ. ಅವರ ಪತ್ನಿಯೂ ಕೂಡ ಇಲ್ಲ, ಈಗ ಅವರು ಚಿಕ್ಕಮಗಳೂರಿನಿಂದ ಬರುತ್ತಿದ್ದಾರೆ. ಅಪಘಾತ ನಡೆದಾಗ ಡ್ರೈವರ್ ಕಾರು ಓಡಿಸುತ್ತಿದ್ದು, ರವಿ ಅವರು ಮಲಗಿದ್ದರು. ಅಪಘಾತವಾದ ಬಳಿಕ ವಿಕ್ರಂ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ರೆಸ್ಟ್ ಮಾಡುತ್ತಿದ್ದಾರೆ. ನನಗೂ ಮಾತನಾಡಿಸಲು ಸಿಗಲಿಲ್ಲ. ಅವರ ಗನ್ ಮ್ಯಾನ್ ಇದ್ದರು ಅಷ್ಟೆ ಎಂದು ಗುರು ತಿಳಿಸಿದರು.

https://www.youtube.com/watch?v=YPEOa75NnvQ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *