ನಟ ದಿಗಂತ್ ಅಪಘಾತ : ಸಹಾಯಕ್ಕೆ ನಿಂತ ದೊಡ್ಡ ವ್ಯಕ್ತಿ ಯಾರು?

ಕುಟುಂಬದ ಜೊತೆ ಪ್ರವಾಸಕ್ಕೆಂದು ಗೋವಾಗೆ ಹೋಗಿದ್ದ ನಟ ದಿಗಂತ್, ಕತ್ತಿಗೆ ಏಟು ಮಾಡಿಕೊಂಡಿದ್ದರು. ಈ ಸಮಯದಲ್ಲಿ ಅವರಿಗೆ ತುರ್ತಾಗಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿ ಬಂತು. ಗೋವಾದಿಂದ ಬೆಂಗಳೂರಿಗೆ ಅವರನ್ನು ಹೇಗೆ ಕರೆದುಕೊಂಡು ಹೋಗುವುದು ಎನ್ನುವ ಚಿಂತೆ ಅವರ ಕುಟುಂಬಕ್ಕೆ ಶುರುವಾಯಿತು. ಆಗ ಇವರ ಸಹಾಯಕ್ಕೆ ಬಂದವರು ಖ್ಯಾತ ನಿರ್ಮಾಪಕ ಹಾಗೂ ಉದ್ಯಮಿ ಎನ್ನುವುದನ್ನು ಸ್ವತಃ ದಿಗಂತ್ ಪತ್ನಿ, ನಟಿ ಐಂದ್ರಿತಾ ರೇ ಬಹಿರಂಗಪಡಿಸಿದ್ದಾರೆ.

ಗೋವಾದಿಂದ ಬೆಂಗಳೂರಿಗೆ ಹೇಗೆ ಹೋಗಬೇಕು ಎಂಬ ಆತಂಕದಲ್ಲಿ ಇದ್ದಾಗ ನಮಗೆ ಸಹಾಯಕ್ಕೆ ಬಂದವರು ಕೆವಿಎನ್ ಪ್ರೊಡಕ್ಷನ್ ಮಾಲೀಕರಾದ ವೆಂಕಟ್ ಕೆ ನಾರಾಯಣ್. ಒಂದು ರೀತಿಯಲ್ಲಿ ಅವರನ್ನು ದೇವರೆ ಕಳುಹಿಸಿದ ಅನ್ನುವಂತಿತ್ತು. ಕಷ್ಟದ ಸಮಯದಲ್ಲಿ ನಮಗೆ ಧೈರ್ಯ ಹೇಳಿ, ಗೋವಾದಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಿಸಲು ಸಹಾಯ ಮಾಡಿದ ವೆಂಕಟ್ ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು ಎಂದು ಐಂದ್ರಿತಾ ರೇ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಅಂಡರ್ ವರ್ಲ್ಡ್ ನಿಂದಾಗಿ ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ಹಿನ್ನೆಡೆ

ಕೆವಿಎನ್ ಪ್ರೊಡಕ್ಷನ್ ಮೂಲಕ ಕನ್ನಡದಲ್ಲಿ ಭಾರೀ ಬಜೆಟ್ ಸಿನಿಮಾಗಳನ್ನು ಮಾಡುತ್ತಿರುವ ವೆಂಕಟ್, ಇದೀಗ ಯಶ್ ಅವರ ಹೊಸ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ ಎನ್ನುವ ಸುದ್ದಿಯಿದೆ. ಈ ಹಿಂದೆ ಗೋವಾದಲ್ಲೇ ಯಶ್ ಜೊತೆ ಗೋವಾ ಮುಖ್ಯಮಂತ್ರಿಯನ್ನು ವೆಂಕಟ್ ಭೇಟಿ ಮಾಡಿ ಕುತೂಹಲ ಮೂಡಿಸಿದ್ದರು. ಇದೀಗ ಧ್ರುವ ಸರ್ಜಾ ಅವರ ಚಿತ್ರಕ್ಕೆ ಇವರೇ ನಿರ್ಮಾಪಕರು.

Live Tv

Comments

Leave a Reply

Your email address will not be published. Required fields are marked *