ಮಾಜಿ ಪತ್ನಿ ಮರೆತು ಸಿನಿಮಾಗೆ ವಿಶ್ ಮಾಡಿದ ಧನುಷ್‌

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಪುತ್ರಿ ಐಶ್ವರ್ಯಾ (Aishwarya) ಮತ್ತು ನಟ ಧನುಷ್ (Actor Dhanush) ಜೋಡಿ ಕಳೆದ ವರ್ಷ ಡಿವೋರ್ಸ್ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇದೀಗ ಮಾಜಿ ಪತ್ನಿ ಐಶ್ವರ್ಯಾ ಸಿನಿಮಾಗೆ ಶುಭಹಾರೈಸುವ ಮೂಲಕ ಧನುಷ್ ಮತ್ತೆ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ವಿಜಯ್ ರಾಜಕಾರಣಕ್ಕೆ ಎಂಟ್ರಿ: ಅಭಿನಂದನೆ ಸಲ್ಲಿಸಿದ ತಲೈವ

ತಂಡಕ್ಕೆ ನನ್ನ ಶುಭ ಹಾರೈಕೆ. ಒಳ್ಳೆಯದಾಗಲಿ ಧನುಷ್ ಹಾರೈಸಿದ್ದಾರೆ. ‘ಸೂಪರ್‌ಸ್ಟಾರ್’ ಹ್ಯಾಶ್‌ಟ್ಯಾಗ್ ಹಾಕಿದ್ದಾರೆ. ಆದರೆ, ಅವರು ಎಲ್ಲಿಯೂ ಮಾಜಿ ಪತ್ನಿ ಐಶ್ವರ್ಯಾ ಹೆಸರನ್ನು ಉಲ್ಲೇಖ ಮಾಡಿಲ್ಲ. ಅವರನ್ನು ಟ್ಯಾಗ್ ಕೂಡ ಮಾಡಿಲ್ಲ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ಪತ್ನಿ ಚಿತ್ರಕ್ಕೆ ಶುಭಕೋರಿದ ಮೇಲೆ ಅವರ ಪತ್ನಿಯ ಹೆಸರನ್ನು ಉಲ್ಲೇಖ ಮಾಡಲು ಏನು ಸಮಸ್ಯೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

‘ಲಾಲ್ ಸಲಾಂ’ (Lal Salaam) ಸಿನಿಮಾ ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ನಡುವೆ ನಡೆಯುವ ಘರ್ಷಣೆ ಮತ್ತು ಸಾಮರಸ್ಯದ ಕಥೆಯನ್ನು ಹೇಳಲಿದೆ. ಈ ಬಗ್ಗೆ ಟ್ರೈಲರ್‌ನಲ್ಲಿ ಸುಳಿವು ನೀಡಲಾಗಿದೆ. ಎಲ್ಲ ದೇವರೂ ಒಂದೇ ಎನ್ನುವ ಡೈಲಾಗ್ ಹೈಲೈಟ್ ಆಗಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್ ಕೂಡ ಇದೆ. ತಲೈವಾ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಮಗಳ ನಿರ್ದೇಶನದ ಸಿನಿಮಾಗೆ ರಜನಿಕಾಂತ್ ಸಾಥ್ ನೀಡಿದ್ದಾರೆ.

‘ಲಾಲ್ ಸಲಾಂ’ ಚಿತ್ರದಲ್ಲಿ ತಲೈವಾ ಅತಿಥಿಯಾಗಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಷ್ಣು ವಿಶಾಲ್, ವಿಕ್ರಾಂತ್, ಧನ್ಯಾ ಬಾಲಕೃಷ್ಣನ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಫೆ.9ರಂದು ಈ ಚಿತ್ರ ರಿಲೀಸ್ ಆಗಲಿದೆ. ಟ್ರೈಲರ್‌ನಲ್ಲಿ ತಲೈವಾ ಎಂಟ್ರಿ ನೋಡಿ ಫಿದಾ ಆಗಿರೋ ಅಭಿಮಾನಿಗಳು ‘ಲಾಲ್ ಸಲಾಂ’ ಚಿತ್ರ ನೋಡಲು ಕಾಯ್ತಿದ್ದಾರೆ.