ಮದುವೆ ಸಂಭ್ರಮದಲ್ಲಿ ‘ಗೀತಾ’ ಸೀರಿಯಲ್‌ ನಟ ಧನುಷ್

‘ಗೀತಾ’ ಸೀರಿಯಲ್ (Geetha Serial) ಹೀರೋ ಧನುಷ್ ಗೌಡ (Dhanush Gowda) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಧನುಷ್ ಮನೆಯಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಿದೆ.‌ ಅತ್ತೆಯ ಮಗಳ ಜೊತೆ ಹಸೆಮಣೆ ಏರಲು ನಟ ರೆಡಿಯಾಗಿದ್ದಾರೆ. ಇದನ್ನೂ ಓದಿ:ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ- ಸಖತ್ ಹಾಟ್ ಎಂದ ನೆಟ್ಟಿಗರು

ಧನುಷ್ ಮತ್ತು ವಧು ಸಂಜನಾ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಮೆಹೆಂದಿ ಶಾಸ್ತ್ರ, ಬಳೆ ಶಾಸ್ತ್ರ ಸೇರಿದಂತೆ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಲಾಗಿದೆ. ಮದುವೆಗೆ ನಟ ರೆಡಿಯಾಗಿದ್ದಾರೆ. ಇದನ್ನೂ ಓದಿ:ನೇಹಾ ಪೋಷಕರಿಗೆ ಮಾಳವಿಕಾ ಅವಿನಾಶ್ ಸಾಂತ್ವನ- ಸರ್ಕಾರದ ವಿರುದ್ಧ ನಟಿ ವಾಗ್ದಾಳಿ

ಕಳೆದ ಡಿಸೆಂಬರ್‌ನಲ್ಲಿ ಧನುಷ್ ಅವರು ಅತ್ತೆ ಮಗಳು ಸಂಜನಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಈ ನಿಶ್ಚಿತಾರ್ಥ ನೆರವೇರಿತ್ತು. ಈಗ ಮದುವೆ ಬಗ್ಗೆ ಧನುಷ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಗೀತಾ ಸೀರಿಯಲ್ ಮೂಲಕ ಭವ್ಯಾ ಗೌಡಗೆ ಹೀರೋ ಆಗಿ ನಟಿಸಿದ್ದ ಧನುಷ್ ಸದ್ಯ ಸಿನಿಮಾ ಮಾಡಲು ತಯಾರಿ ಮಾಡಿಕೊಳ್ತಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಮಾಹಿತಿ ಸಿಗಲಿದೆ.