ನಟ ಧನಂಜಯ್ ರಾಜಕೀಯ ಪ್ರವೇಶ: ನಡೀರಿ ಏನಾರ ಒಂದಿಷ್ಟು ಒಳ್ಳೆ ಕೆಲಸ ಮಾಡೋಣ ಅಂದ ಡಾಲಿ

ನಿನ್ನೆಯಿಂದ ನಟ ಡಾಲಿ ಧನಂಜಯ್ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಅದರಲ್ಲೂ ಅರಸಿಕೆರೆ ಶಿವಲಿಂಗೇಗೌಡರ ಬದಲಿಗೆ ಜೆ.ಡಿ.ಎಸ್ ಪಕ್ಷವು ಡಾಲಿ ಧನಂಜಯ್ ಅವರನ್ನು ಸ್ಪರ್ಧಾ ಕಣಕ್ಕೆ ಇಳಿಸಲಾಗುತ್ತಿದೆ ಎಂದು ಸುದ್ದಿಯಾಗಿತ್ತು. ನಟನೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುವಾಗ ಡಾಲಿಗೆ ರಾಜಕೀಯ ಬೇಕಿತ್ತಾ ಎಂದೂ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಈ ಎಲ್ಲದರ ಕುರಿತು ಡಾಲಿ ಧನಂಜಯ್ ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ್ದಾರೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

‘ನಾನು ರಾಜಕೀಯ ಸೇರುತ್ತೇನೆ ಎಂದು ಯಾರಿಗೂ ಹೇಳಿಲ್ಲ. ಯಾವತ್ತೂ ಯೋಚಿಸಿಲ್ಲ. ಹೀಗೆ ಗೆಳೆಯರು ಸುದ್ದಿಯನ್ನು ಕಳುಹಿಸಿದ ಮೇಲೆ ನನಗೂ ಗೊತ್ತಾಯಿತು. ನಾನು ಶೂಟಿಂಗ್ ನಲ್ಲಿ ಇದ್ದೇನೆ. ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕಲಾವಿದನಾಗಿ ಜನರು, ಅಭಿಮಾನಿಗಳು ನನ್ನನ್ನು ಸ್ವೀಕರಿಸಿದ್ದಾರೆ. ಅಭಿಮಾನಿ ದೇವರುಗಳನ್ನು ರಂಜಿಸುವುದಷ್ಟೇ ನನ್ನ ಕೆಲಸ. ರಾಜಕೀಯಕ್ಕೆ ಸೇರುತ್ತೇನೆ ಎನ್ನುವುದು ಸುಳ್ಳು ಸುದ್ದಿ’ ಎಂದಿದ್ದಾರೆ ಡಾಲಿ. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

ಈ ಕುರಿತು ಅವರು ಫೇಸ್ ಬುಕ್ ನಲ್ಲೂ ಬರೆದುಕೊಂಡಿದ್ದು, ‘ಸುಮ್ನೆ ಏನೇನೊ ಸುದ್ದಿ ಬರೆಯೋದು, ತೋರಿಸೋದು, ಕೇಳೋದು, ನೋಡೋದು, ನಂಬೋದು ಎಲ್ಲ ಬಿಟ್ಟು ನಡೀರಿ ಏನಾರ ಒಂದಿಷ್ಟು ಒಳ್ಳೆಯ ಕೆಲಸ ಮಾಡೋಣ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

ಮೊನ್ನೆಯಷ್ಟೇ ಜಮಾಲಿಗುಡ್ಡ ಸಿನಿಮಾದ ಶೂಟಿಂಗ್ ಮುಗಿಸಿರುವ ಡಾಲಿ, ಇದೀಗ ಹೊಯ್ಸಳ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ, ಇನ್ನೂ ಹಲವು ಚಿತ್ರಗಳಿಗೆ ಸಹಿ ಮಾಡಿದ್ದಾರೆ. ಹೀಗಾಗಿ ರಾಜಕೀಯ ಸೇರುವುದು ಕನಸಿನಲ್ಲೂ ಸಾಧ್ಯವಿಲ್ಲ ಎಂದಿದ್ದಾರೆ ಡಾಲಿ .

Comments

Leave a Reply

Your email address will not be published. Required fields are marked *