ದರ್ಶನ್‌ ನೋಡಲು ಜೈಲಿಗೆ ಆಗಮಿಸಿದ ಪತ್ನಿ ವಿಜಯಲಕ್ಷ್ಮಿ

– ಹಣ್ಣು ನೀಡಿ, ಕುಶಲೋಪರಿ ವಿಚಾರಿಸಿ ವಾಪಸ್‌

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಪರಪ್ಪನ ಜೈಲು ಸೇರಿರುವ ನಟ ದರ್ಶನ್‌ (Darshan) ನೋಡಲು ಪತ್ನಿ ವಿಜಯಲಕ್ಷ್ಮಿ ಸೋಮವಾರ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದರು.

ಫಾರ್ಚುನರ್‌ ಕಾರಿನಲ್ಲಿ ಪೊಲೀಸ್‌ ಠಾಣೆ ವರೆಗೆ ದರ್ಶನ್‌ ಪತ್ನಿ ಡ್ರಾಪ್‌ ಪಡೆದರು. ಪೊಲೀಸ್‌ ಠಾಣೆ ವರೆಗೂ ಬಿಡಲು ಮನವಿ ಮಾಡಿದರೂ ಪೊಲೀಸ್‌ ಸಿಬ್ಬಂದಿ ಒಪ್ಪಲಿಲ್ಲ. ಜೈಲು ಚೆಕ್‌ ಪೋಸ್ಟ್‌ ಬಳಿ ಕಾರು ತಡೆಯಲಾಯಿತು. ಇದರಿಂದ ಕಾರು ವಾಪಸ್‌ ಆಯಿತು. ಕೊನೆಗೆ ಜೈಲು ಚೆಕ್‌ ಪೋಸ್ಟ್‌ ವರೆಗೆ ವಿಜಯಲಕ್ಷ್ಮಿ ಅವರು ನಡೆದುಕೊಂಡೇ ಬಂದರು. ಜೈಲಿನ ಕಚೇರಿಯಲ್ಲಿ ಸಾಮಾನ್ಯರಂತೆ ವಿಜಯಲಕ್ಷ್ಮಿ ಅವರು ಪ್ರವೇಶ ಪಡೆದು ಪತಿಯನ್ನು ಭೇಟಿಯಾದರು. ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಮತ್ತಿಬ್ಬರ ಬಂಧನ, ಒಟ್ಟು 9 ಯುವಕರು ಅರೆಸ್ಟ್

ಸಂಜೆ 4:30 ಸುಮಾರಿಗೆ ಜೈಲಿಗೆ ವಿಜಯಲಕ್ಷ್ಮಿ ಆಗಮಿಸಿದ್ದರು. ಸಾಮಾನ್ಯ ಎಂಟ್ರಿ ಪಡೆದು 5 ಗಂಟೆ ಸುಮಾರಿಗೆ ವಾಪಸ್‌ ಆದರು. ಸಾಮಾನ್ಯ ಎಂಟ್ರಿ ಹಿನ್ನೆಲೆ ಅರ್ಧ ತಾಸು ಮಾತ್ರ ಭೇಟಿಗೆ ಅವಕಾಶ ನೀಡಲಾಗಿತ್ತು.

ಹಣ್ಣು ನೀಡಿ ಪತಿ ದರ್ಶನ್‌ ಕುಶಲೋಪರಿ ವಿಚಾರಿಸಿದರು. ಈ ವೇಳೆ ಪತ್ನಿ ಬಳಿ ಮಗನ ಬಗ್ಗೆ ದರ್ಶನ್‌ ವಿಚಾರಿಸಿದರು. ಇದನ್ನೂ ಓದಿ: 3ನೇ ಬಾರಿಗೆ ಪರಪ್ಪನ ಅಗ್ರಹಾರ ಸೇರಿದ ದರ್ಶನ್‌