ಬೆಂಗಳೂರು: ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ಅವರ ತಂದೆಯನ್ನೇ ಹಿಂಬಾಲಿಸುತ್ತಾರೆ. ಅದೇ ರೀತಿ ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ ವಿನೀಶ್ ಕೂಡ ಅಪ್ಪನ ಹಾದಿಯಲ್ಲೇ ಹೋಗುತ್ತಿದ್ದಾರೆ.
ನಟ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಈಗಾಗಲೇ ಅವರು ಅನೇಕ ಪ್ರಾಣಿಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅವರಿಗೆ ಕುದುರೆ ಅಂದರೆ ಅಚ್ಚುಮೆಚ್ಚು, ಅವರು ಸಾಕಿರುವ ಕುದುರೆ ಮೇಲೆ ಅನೇಕ ಬಾರಿ ಸವಾರಿಯನ್ನು ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಸಿನಿಮಾದಲ್ಲು ಅವರ ಕುದುರೆಯಲ್ಲೇ ಸವಾರಿ ಮಾಡಿದ್ದಾರೆ.

ದರ್ಶನ್ ಅವರ ಮಗ ವಿನೀಶ್ ಗೂ ಕೂಡ ಪ್ರಾಣಿಗಳ ಮೇಲೆ ತುಂಬಾ ಪ್ರೀತಿ. ಅವರು ಕೂಡ ಒಂದು ಕುದುರೆಯನ್ನು ಸಾಕುತ್ತಿದ್ದಾರೆ. ಈಗ ಅವರು ಸಾಕುತ್ತಿರುವ ಕುದುರೆ ಮೇಲೆ ವಿನೀಶ್ ಸವಾರಿ ಮಾಡಿದ್ದಾರೆ. ವಿನೀಶ್ ಸವಾರಿ ಮಾಡುತ್ತಿದ್ದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ನಟ ದರ್ಶನ್ ನಟಿಸುತ್ತಿರುವ ಬಹು ನಿರೀಕ್ಷಿತ `ಯಜಮಾನ’ ಚಿತ್ರದ ಶೂಟಿಂಗ್ ಸೆಟ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಯಜಮಾನ ಚಿತ್ರದಲ್ಲಿ ಜೂನಿಯರ್ ದರ್ಶನ್, ವಿನೀಶ್ ಒಂದು ವಿಶೇಷ ಹಾಡಿನಲ್ಲಿ ನಟಿಸುತ್ತಿದ್ದಾರೆ. ಈ ಹಾಡಿನಲ್ಲಿ ಅಪ್ಪ ಮಗ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ. ಮಗನ ನಟನೆಯನ್ನು ನೋಡಲು ತಾಯಿ ವಿಜಯಲಕ್ಷ್ಮಿ ಚಿತ್ರೀಕರಣ ಸೆಟ್ ಗೆ ಭೇಟಿ ಕೊಟ್ಟಿದ್ದರು.

`ಐರಾವತ’ ಚಿತ್ರದ ನಂತರ ಯಜಮಾನ ಚಿತ್ರದಲ್ಲಿ ದರ್ಶನ್ ಹಾಗೂ ವಿನೀಶ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕ ದರ್ಶನ್ ಅಪಘಾತದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಮೈಸೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Junior Boss VinishDarshan 👌 @dasadarshan @vijayaananth2 pic.twitter.com/OCT4KAGrca
— 𝕍𝕚𝕛𝕦𝔻𝕒𝕣𝕤𝕙𝕦𝔽ℂ (@Viju_DarshuFC1) October 5, 2018

Leave a Reply