ಎಲ್ಲವೂ ಜನರಿಗೆ ಬಿಟ್ಟಿದ್ದು, ಓವರ್ ಕಾನ್ಫಿಡೆನ್ಸ್ ಇಲ್ಲ: ದರ್ಶನ್

ಮಂಡ್ಯ: ಇನ್ನೂ ಆರು ದಿನಗಳ ಕಾಲ ಪ್ರತಿದಿನದಂತೆ ಪ್ರಚಾರ ಮಾಡುತ್ತೇವೆ. ನಮಗೆ ವಿಶ್ವಾಸ ಇದೆ. ಆದರೆ ಓವರ್ ಕಾನ್ಫಿಡೆನ್ಸ್ ಇಲ್ಲ ಎಂದು ನಟ ದರ್ಶನ್ ಪ್ರಚಾರದ ವೇಳೆ ತಿಳಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮತನಾಡಿದ ದರ್ಶನ್, ಇವತ್ತಿನ ಪ್ರಚಾರ ತುಂಬಾ ಚೆನ್ನಾಗಿ ನಡೆಯುತ್ತಿದೆ. ಲೋಕಸಭಾ ಚುನಾವಣೆಗೆ ಇನ್ನು ಆರು ದಿನಗಳು ಉಳಿದಿವೆ. ಪ್ರತಿದಿನ ಮಾಡುವ ರೀತಿ ಮಾಡುತ್ತಿದ್ದೇವೆ. ಎಲ್ಲವೂ ಜನರಿಗೆ ಬಿಟ್ಟಿದ್ದು, ಅವರೇ ತೀರ್ಮಾನ ಮಾಡುತ್ತಾರೆ. ನಮಗೆ ವಿಶ್ವಾಸವಿದೆ. ಆದರೆ ಓವರ್ ಕಾನ್ಫಿಡೆನ್ಸ್ ಇಲ್ಲ ಎಂದು ದರ್ಶನ್ ಹೇಳಿದರು.

ಇಂದು ಸಿನಿಮಾ ಕೂಡ ಬಿಸಿನೆಸ್ ಆಗಿದೆ. ಟಿವಿಯಲ್ಲೂ ಉಚಿತವಾಗಿ ಏನೂ ತೋರಿಸಲ್ಲ. ಎಲ್ಲ ಚಾನೆಲ್ ಗಳಿಗೂ ಜನರು ಹಣ ಕೊಡುತ್ತಾರೆ. ನಮ್ಮ ಮನೆಯಲ್ಲೂ ದೊಡ್ಡ ಟಿವಿ ಇದೆ. ಆದರೆ ಸುಮ್ಮನೆ ಟಿವಿ ಆನ್ ಮಾಡಿದರೆ ಏನೂ ಬರಲ್ಲ. ಹಣ ಕೊಟ್ಟರಷ್ಟೇ ಸಿನಿಮಾ ಬರುತ್ತದೆ ಎಂದು ನಟರು ನಟರಷ್ಟೇ, ಪುಗ್ಸಟ್ಟೆ ಸಿನಿಮಾ ತೋರಿಸಲ್ಲ ಎಂಬ ಶಾಸಕ ಸುರೇಶ್‍ಗೌಡ ಹೇಳಿಕೆಗೆ ದರ್ಶನ್ ಟಾಂಗ್ ಕೊಟ್ಟರು.

ಪ್ರಚಾರಕ್ಕೆ ಹೋಗುತ್ತಿರುವ ಕಡೆ ಅಭಿಮಾನಿಗಳು ಪ್ರತಿದಿನ ಪಾರಿವಾಳ ಕೊಡುತ್ತಿದ್ದಾರೆ. ನನಗೂ ಮೊದಲಿಂದಲೂ ಪ್ರಾಣಿಗಳು ಅಂದರೆ ಇಷ್ಟ. ಹಾಗಾಗಿ ಅವರು ಕೊಟ್ಟ ಪಾರಿವಾಳಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಪ್ರಾಣಿಗಳ ಮೇಲಿನ ಪ್ರೀತಿಯ ಬಗ್ಗೆ ದರ್ಶನ್ ತಿಳಿಸಿದರು.

Comments

Leave a Reply

Your email address will not be published. Required fields are marked *