ನಾಯಿಗೆ 5 ಸಾವಿರ ಬೇಕು – 500, ಸಾವಿರ ಪಡೆದು ಮತ ಹಾಕಬೇಡಿ

-ಅಭಿಮಾನಿಗಳಲ್ಲಿ ಕೈ ಮುಗಿದು ದರ್ಶನ್ ಕ್ಷಮೆ

ಮಂಡ್ಯ: ಇವತ್ತು ಒಂದು ನಾಯಿ ತೆಗೆದುಕೊಳ್ಳಬೇಕಾದರೆ ಐದು ಸಾವಿರ ರೂ. ಹಣ ಬೇಕು. ಹೀಗಾಗಿ ನೀವು 500, ಸಾವಿರ ರೂ. ಹಣ ಪಡೆದು ವೋಟು ಹಾಕಬೇಡಿ ಎಂದು ನಟ ದರ್ಶನ್ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

ಕೆ.ಆರ್ ನಗರದ ಭೇರ್ಯ ಹೋಬಳಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ದರ್ಶನ್, ಇಂದು ಮನೆಗೆ ಎತ್ತು ಕೊಳ್ಳಲು ಒಂದೂವರೆ ಲಕ್ಷ ರೂ. ಖರ್ಚು ಮಾಡುತ್ತೇವೆ. ಇನ್ನೂ ಹಾಲು ಕರೆಯುವ ಹಸು ತೆಗೆದುಕೊಳ್ಳಲು 70-80 ಸಾವಿರ ಹಣ ಬೇಕು. ಅದೇ ರೀತಿ ಒಂದು ಕುರಿ ಕೊಳ್ಳಲು 15-20 ಸಾವಿರ ಹಣ ಬೇಕು. ಇದೆಲ್ಲಾ ಬಿಡಿ ಒಂದು ನಾಯಿಗೆ ಐದು ಸಾವಿರ ಬೇಕು. ಇನ್ನು 500-ಸಾವಿರ ಹಣ ಪಡೆದು ಮತ ಹಾಕಬೇಡಿ ಎಂದು ಹೇಳಿದರು.

ಒಂದು ವೇಳೆ ಹಣ ಪಡೆದು ಮತ ಹಾಕಿದರೆ ನಾವು ಪ್ರಾಣಿಗಳಿಗಿಂತ ಕಡೆಯಾಗುತ್ತೇವೆ. ಆಗ ಮನುಷ್ಯರು ಅಂದರೆ ಬೆಲೆ ಇರಲ್ಲ. ಹೀಗಾಗಿ ಯಾವುದೇ ಆಮಿಷಕ್ಕೂ ಒಳಗಾಗದೇ ಅಮ್ಮನಿಗೆ ಅವಕಾಶ ಮಾಡಿಕೊಡಿ. ಅಮ್ಮ ಯಾರನ್ನು ನಂಬಿ ಬಂದಿಲ್ಲ. ನಿಮ್ಮನ್ನ ನಂಬಿ ಬಂದಿದ್ದಾರೆ. ಅವರನ್ನು ಗೆಲ್ಲಿಸಿ ಎಂದು ದರ್ಶನ್ ಮನವಿ ಮಾಡಿದರು.

ಬುಧವಾರ ರಾತ್ರಿ ಸಮಯ ಮುಗಿದಿತ್ತು. ಸಮಯ ಮುಗಿದ ಮೇಲೆ ಪ್ರಚಾರಕ್ಕೆ ಅವಕಾಶ ಇಲ್ಲ. ಹಾಗಾಗಿ ಬರಕ್ಕಾಗಿಲ್ಲ, ಹೀಗಾಗಿ ಕ್ರಮಸಂಖ್ಯೆ 20ಕ್ಕೆ ಮತ ಹಾಕಿ ಅಮ್ಮನನ್ನು ಗೆಲ್ಲಿಸಿ ಎಂದು ಅಭಿಮಾನಿಗಳ ಬಳಿ ದರ್ಶನ್ ಕೈ ಮುಗಿದು ಕ್ಷಮೆ ಕೋರಿದ್ದಾರೆ.

Comments

Leave a Reply

Your email address will not be published. Required fields are marked *